ಹೆಬ್ರಿ : ಹೆಬ್ರಿ ತಾಲ್ಲೂಕಿನಾದ್ಯಂತ ಶನಿವಾರದಿಂದ ಭಾರಿ ಮಳೆಯಾಗುತ್ತಿದೆ. ನದಿ, ಹೊಳೆಗಳು ತುಂಬಿ ಹರಿಯುತ್ತಿದೆ. ಹೆಬ್ರಿಯ ಜೀವನದಿ ಸೀತಾನದಿ ತುಂಬಿ ಹರಿಯುತ್ತಿದೆ. ಶನಿವಾರ ಬೀಸಿದ ಗಾಳಿಗೆ ಹಲವೆಡೆ ಮರಗಳು ಉರುಳಿದ್ದು ವಿದ್ಯುತ್ ಸರಬರಾಜು ಲೈನ್ ಗೆ ಹಾನಿಯಾಗಿದೆ. ಹೆಬ್ರಿಯ ಸೀತಾನದಿ ದುಡ್ಡಿನ ಜಡ್ಡು ಪರಿಸರದಲ್ಲಿ ಹಾನಿಯಾಗಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದೆ. ಭಾನುವಾರ ದುರಸ್ತಿ ಕಾರ್ಯ ನಡೆಯುತ್ತಿದೆ.



