Saturday, August 8, 2026
Homeಹೆಬ್ರಿಹೆಬ್ರಿ ಸಂಜೀವಿನಿ ಒಕ್ಕೂಟದ ಹಣ ದುರುಪಯೋಗ : ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು.

ಹೆಬ್ರಿ ಸಂಜೀವಿನಿ ಒಕ್ಕೂಟದ ಹಣ ದುರುಪಯೋಗ : ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು.

ಅಧ್ಯಕ್ಷರು ಕಾರ್ಯದರ್ಶಿ ನಕಲಿ ಸಹಿ ಬಳಕೆ.

ಹೆಬ್ರಿ: ಸಂಜೀವಿನಿ ಯೋಜನೆಯ ಹಣವನ್ನು ತನ್ನ ಸ್ವಂತಕ್ಕೆ ಬಳಸಿ ದುರುಪಯೋಗದ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ರಿಯ ನಂದಿನಿ ಎಂಬುವವರು ಧನ ಲಕ್ಷ್ಮೀ ಸಂಜಿವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇದರ ಮುಖ್ಯ ಪುಸ್ತಕ ಬರಹಗಾರರಾಗಿದ್ದು, ಸಂಸ್ಥೆಯಲ್ಲಿ 8 ವರ್ಷದಿಂದ ಕೆಲಸ ಮಾಡಿಕೊಂಡಿದ್ದರು. ಇವರು 2020 ರಿಂದ 2026 ರವರೆಗೆ ಧನ ಲಕ್ಷ್ಮೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸದಸ್ಯತ್ವ ಹೊಂದಿರುವ ವಿವಿಧ ಸ್ವ ಸಹಾಯ ಸಂಘದ ಸದಸ್ಯರುಗಳು ಪಡೆದುಕೊಂಡ ಸಾಲವನ್ನು ಒಕ್ಕೂಟಕ್ಕೆ ಮರು ಪಾವತಿ ಮಾಡಿದ್ದರೂ ಕೂಡ ಸಾಲದ ಹಣವನ್ನು ಒಕ್ಕೂಟದ ಖಾತೆಗೆ ಜಮಾ ಮಾಡದೆ ಎರಡೆರಡು ಖಾತೆ ಪುಸ್ತಕಗಳನ್ನು ಹಾಗೂ ರಶೀದಿ ಪುಸ್ತಕಗಳನ್ನು ನಿರ್ವಹಣೆ ಮಾಡಿ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿರವರ ನಕಲಿ ಸಹಿಗಳನ್ನು ಮಾಡಿ ಒಟ್ಟು 28,19,489/-ಮೊತ್ತವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ನಂಬಿಕೆ ದ್ರೋಹವೆಸಗಿ ಮೋಸ ಮಾಡಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments