ಕ್ರೀಡಾಕೂಟ ಮುಂದೂಡಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶ.
ಹೆಬ್ರಿ : ರಾಜ್ಯಾದಾದ್ಯಂತ 2026 – 27ನೇ ಸಾಲಿನ ಶಾಲೆಯ ಶೈಕ್ಷಣಿಕ ಕ್ರೀಡಾಕೂಟವನ್ನು ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲು ಕ್ರೀಡಾ ಸುತ್ತೋಲೆಯನ್ನು ಹೊರಡಿಸಲಾಗಿತ್ತು.
ಆ ಸುತ್ತೋಲೆಯನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ತಮ್ಮ ಪೋಷಕರ ಮೂಲಕ ರಾಜ್ಯ ಹೈಕೋರ್ಟ್ ನಲ್ಲಿ ದಾವೆ ಹೂಡಿರುವ ಹಿನ್ನಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿ ಹೊರಡಿಸಿರುವ ಕ್ರೀಡಾ ಸುತ್ತೋಲೆಯನ್ನು ಜಾರಿಗೆ ತರದಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಪ್ರಕರಣವು ಹೈಕೋರ್ಟ್ ನಲ್ಲಿ ವಿಚಾರಣೆಯಲ್ಲಿ ಇರುವ ಕಾರಣದಿಂದ ಹೈಕೋರ್ಟ್ ಅಂತಿಮ ಆದೇಶ ಅಥವಾ ಸರ್ಕಾರ, ಸಕ್ಷಮ ಪ್ರಾಧಿಕಾರದಿಂದ ಮುಂದಿನ ನಿರ್ದೇಶನಗಳು ಲಭಿಸುವ ತನಕ ಕ್ರೀಡಾಕೂಟಗಳನ್ನು ತಾತ್ಕಾಲಿಕವಾಗಿ ಮುಂದೂಡಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ನೀಡಿದ್ದಾರೆ.


