Wednesday, September 23, 2026
Homeಶಿವಪುರ ಗ್ರಾಮ ಪಂಚಾಯತ್‌ಜನಸೇವೆಯಲ್ಲಿ ಮನಗೆದ್ದ ಮೂರ್ತಿ - ಸುರೇಶ್ ಶೆಟ್ಟಿ ಶಿವಪುರ.

ಜನಸೇವೆಯಲ್ಲಿ ಮನಗೆದ್ದ ಮೂರ್ತಿ – ಸುರೇಶ್ ಶೆಟ್ಟಿ ಶಿವಪುರ.

ಮೂರ್ತಿ ಕಂದಾಯ ಇಲಾಖೆಯಲ್ಲಿ ಉತ್ತಮ ಅಧಿಕಾರಿಯಾಗಲಿ – ಮೋಹನದಾಸ ನಾಯಕ್.

ಶಿವಪುರ ಗ್ರಾಮ ಸಹಾಯಕ ಮೂರ್ತಿ ಅವರಿಗೆ ಸನ್ಮಾನ.

ಶಿವಪುರ : ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಗ್ರಾಮ ಆಡಳಿತಾಧಿಕಾರಿ ರಾಚಪ್ಪಜಿ ಅವರಿಗೆ ನಡೆದ ಸಾರ್ವಜನಿಕ ಸನ್ಮಾನ ಕಾರ್ಯಕ್ರಮದಲ್ಲಿ ಶಿವಪುರ ಗ್ರಾಮ ಸಹಾಯಕ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಂಘಟಕ ಶಿವಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಹುಣ್ಸೆದಡಿ ಮಾತನಾಡಿ ನಮ್ಮ ಮೂರ್ತಿ ನಮ್ಮೂರಿಗೆ “ಡಿಸಿ” ಇದ್ದಂತೆ. ಜನರ ಕೆಲಸ ಮಾಡಿ ಜನಮನ ಗೆದ್ದಿದ್ದಾರೆ. ಪ್ರಾಮಾಣಿಕವಾಗಿ ಕರ್ತವ್ಯವನ್ನು ಮಾಡಿ ವಿ.ಎ ಯಿಂದ ತಹಶೀಲ್ಧಾರ್ ವರೆಗೆ ಎಲ್ಲರ ಮನವನ್ನು ಅವಿಭಜಿತ ಕಾರ್ಕಳ ತಾಲ್ಲೂಕು ಇರುವಾಗಲೇ ಮೂರ್ತಿ ಗೆದ್ದಿದ್ದಾರೆ ಎಂದು ಸುರೇಶ್ ಶೆಟ್ಟಿಯವರು ಅಭಿನಂದಿಸಿದರು.

ಹಿರಿಯರಾದ ಶಿವಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮುರ್ಸಾಲು ಮೋಹನದಾಸ ನಾಯಕ್ ಮಾತನಾಡಿ ಸೇವೆಯಲ್ಲೇ ಸಂತೃಪ್ತಿಯನ್ನು ಕಾಣುತ್ತಿರುವ ಮೂರ್ತಿ ಕಂದಾಯ ಇಲಾಖೆಯ ಅತ್ಯುತ್ತಮ ಅಧಿಕಾರಿಯಾಗಲಿ ಎಂದು ಆಶಿಸಿದರು.

ಕಾರ್ಕಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಪುರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ ಶೆಟ್ಟಿ ಮಾತನಾಡಿ ಗ್ರಾಮ ಸಹಾಯಕ ಮೂರ್ತಿ ಅವರ ಸೇವೆಯನ್ನು ಸ್ಮರಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗ್ರಾಮ ಸಹಾಯಕ ಮೂರ್ತಿ ಶಿವಪುರ ಗ್ರಾಮದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಮೆಚ್ಚುಗೆ ರಾಚಪ್ಪಜಿ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರೊಂದಿಗೆ ಸೇವೆ ಮಾಡಿದ ದಿನಗಳನ್ನು ಮರೆಯಲು ಅಸಾಧ್ಯ. ಸೇವೆಯನ್ನೇ ಜೀವನದ ಧರ್ಮ ಎಂದು ನಂಬಿದವರು. ಅಧಿಕಾರಿ ಎಂಬ ದರ್ಪ ಅವರಲ್ಲಿ ಇಲ್ಲ, ಪ್ರೀತಿಯಿಂದ ನೋಡಿ ಕೊಂಡಿದ್ದಾರೆ. ಅವರು ನಮ್ಮ ಗ್ರಾಮ ಬಿಟ್ಟು ಹೋಗುವುದು ಬೇಸರವಾದರೂ ಕಂದಾಯ ನಿರೀಕ್ಷಕರಾಗಿ ಪದೋನ್ನತಿ ಪಡೆದು ಕಾರ್ಕಳ ತಾಲ್ಲೂಕಿನಲ್ಲೇ ಸೇವೆಗೆ ಅವಕಾಶ ದೊರೆತಿರುವುದು ಹೆಮ್ಮೆಯಾಗುತ್ತಿರುವುದು ಹೆಮ್ಮೆಯಾಗುತ್ತದೆ ಎಂದರು.

ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಘವೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ನಿರೀಕ್ಷಕ ರಾಚಪ್ಪಜಿ, ಕಾರ್ಯಕ್ರಮದ ಸಂಘಟಕರಾದ ಸಮಾಜ ಸೇವಕರಾದ ಬೈಕಾಡಿ ಮಂಜುನಾಥ ರಾವ್‌ ಶಿವಪುರ, ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಕುಮಾರ್‌, ವಿದ್ಯುತ್‌ ಗುತ್ತಿಗೆದಾರ ಉದ್ಯಮಿ ಶ್ರೀನಿವಾಸ ಹೆಬ್ಬಾರ್‌, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಸುಮಿತ್ರಾ ನಾಯ್ಕ್‌, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಅನಸೂಯ, ಮುಖ್ಯ ಶಿಕ್ಷಕಿ ಗುಲಾಬಿ ಅಣ್ಣಪ್ಪ ಕುಲಾಲ್‌, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕರು, ಪ್ರಮುಖರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಣ ರಮಾನಂದ ಶೆಟ್ಟಿ ನಿರೂಪಿಸಿ ಮುಖ್ಯ ಶಿಕ್ಷಕಿ ಗುಲಾಬಿ ಅಣ್ಣಪ್ಪ ಕುಲಾಲ್‌ ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!