Wednesday, September 23, 2026
Homeಹೆಬ್ರಿಹೆಬ್ರಿಯ ಹಲವೆಡೆ ರಸ್ತೆಯ ಮೇಲೆ ನೀರು: ಹೆಬ್ರಿ ತಹಶೀಲ್ಧಾರ್ ಭೇಟಿ- ಸ್ಥಳ ಪರಿಶೀಲನೆ.

ಹೆಬ್ರಿಯ ಹಲವೆಡೆ ರಸ್ತೆಯ ಮೇಲೆ ನೀರು: ಹೆಬ್ರಿ ತಹಶೀಲ್ಧಾರ್ ಭೇಟಿ- ಸ್ಥಳ ಪರಿಶೀಲನೆ.

ಹೆಬ್ರಿ : ಹೆಬ್ರಿ ಬ್ರಹ್ಮಾವರ ಕುಂದಾಪುರ ಮುಖ್ಯ ರಸ್ತೆ ಪಕ್ಕದಲ್ಲಿ ಹೆಬ್ರಿಯ ಕೆಳಪೇಟೆ ಯೂನಿಯನ್ ಬ್ಯಾಂಕ್ ಬಳಿ
ರಸ್ತೆಯ ಮೇಲೆ ನೀರು ಹರಿದು ಸಂಚರಿಸುವುದು ಕಷ್ಟವಾಗುತ್ತದೆ.

ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ ಮನವಿ ಹಿನ್ನೆಲೆಯಲ್ಲಿ ಗುರುವಾರ ಹೆಬ್ರಿ ತಹಶೀಲ್ಧಾರ್ ರಾಕೇಶ್ ಫ್ರಾನ್ಸಿಸ್ ಬ್ರೀಟ್ಟೋ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಣ್ಣ ಪ್ರಮಾಣದಲ್ಲಿ ಮಳೆ ಬಂದರೂ ರಸ್ತೆ ಮೇಲೆ ನೀರು ಹೋಗುವುದರಿಂದ ಶಾಲಾ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ರಸ್ತೆಯಲ್ಲಿ ನಡೆದುಕೊಂಡು ಹೋಗುವುದೇ ಸಮಸ್ಯೆ ಚರಂಡಿಯ ಇದ್ದರೂ ದುಸ್ಥಿತಿಯ ಬಗ್ಗೆ ಸೂಕ್ತ ಮಾಹಿತಿಯನ್ನು ಶ್ರೀ ಕಾಂತ್ ನೀಡಿದರು.

ಕೂಡಲೇ ಸಂಬಂಧಪಟ್ಟ ಇಲಾಖೆಗೆ ಚರಂಡಿಗಳನ್ನು ಸರಿಪಡಿಸಿ ರಸ್ತೆ ಮೇಲೆ ನೀರು ಹೋಗದಂತೆ ಕ್ರಮ ಕೈಗೊಳ್ಳುವ ಭರವಸೆ ತಹಶೀಲ್ಧಾರ್ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!