ಮುನಿಯಾಲು : ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ ಇದರ ಆಶ್ರಯದಲ್ಲಿ ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ 7 ದಿನಗಳ ಸರಣಿ ಉಪನ್ಯಾಸ ಕಾರ್ಯಕ್ರಮದ ಸಮಾರೋಪ ಸಮಾರಂಭ ಇತ್ತೀಚಿಗೆ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಜಿ ಸುಧಾಕರ್ ವಿದ್ಯಾರ್ಥಿಗಳು ಜೀವನದಲ್ಲಿ ಮನವಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿ ಇದರಿಂದ ಜೀವನ ಸಾರ್ಥಕವಾಗುತ್ತದೆ ಎಂದರು.
ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ ಅಧ್ಯಕ್ಷೆ ಚಂದ್ರಿಕಾ , ಉಪಾಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ , ಮಾಜಿ ಕಾರ್ಯದರ್ಶಿಯಾದ ನಿವೃತ ಮುಖ್ಯ ಶಿಕ್ಷಕ ಪಟ್ಟಾಬಿ ರಾಮ್ ಭಟ್ , ಟೀಮ್ ಮಲೆನಾಡು ಹ್ಯೂಮೇನಿಟೆರಿಯನ್ ಟ್ರಸ್ಟ್ ಬೆಳ್ವೆ ಉಪಾಧ್ಯಕ್ಷ ಅಬ್ದುಲ್ ಶುಕುರ್ ಬೆಳ್ವೆ ಉಪಸ್ಥಿರಿದ್ದರು.
ಲಯನ್ಸ್ ಕ್ಲಬ್ ಕಾರ್ಯಕ್ರಮ ಸಂಘಟಕ ಪತ್ರಕರ್ತ ಸಂಜೀವ ಆರ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ದೇವರಾಜ ನಿರೂಪಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಡಾ. ಜೈಬುನ್ನಿಸ ಸ್ವಾಗತಿಸಿದರು. ಉಪನ್ಯಾಸಕಿ ಬಿಂದು ಎ.ವಂದಿಸಿದರು.



