ನಾರಾಯಣ ಗುರು ಜಯಂತಿ ಮಾನವೀಯತೆಯ ಹಬ್ಬ : ತಹಶೀಲ್ಧಾರ್ ರಾಕೇಶ್ ಫ್ರಾನ್ಸಿಸ್
ಹೆಬ್ರಿ : ಬ್ರಹ್ಮಶ್ರೀ ನಾರಾಯಣ ಗುರುಗಳು 1 ರಾಜ್ಯ, ಜಾತಿ, ಧರ್ಮ ಮತ್ತು ಬಿಲ್ಲವ ಸಮಾಜಕ್ಕೆ ಸೇರಿದವರು ಅಲ್ಲ, ವಿಶ್ವಕ್ಕೆ ಸೇರಿದವರು. ಸರ್ವರಿಗೂ ಸೇರಿದವರು. ಗುರುಗಳ ಸಂದೇಶ, ತತ್ವ ಸರ್ವಕಾಲಿಕ ಎಂದು ಸಂಪನ್ಮೂಲ ವ್ಯಕ್ತಿ ಮುನಿಯಾಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕ ಮಾತಿಬೆಟ್ಟು ಪ್ರಕಾಶ ಪೂಜಾರಿ ಹೇಳಿದರು.
ಅವರು ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ. ಶುಕ್ರವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಇಂದಿನ ಸ್ಕಿಲ್ ಇಂಡಿಯಾ ಪರಿಕಲ್ಪನೆಯನ್ನು ನಾರಾಯಣ ಗುರುಗಳು 100 ವರ್ಷಗಳ ಹಿಂದೆಯೇ ಹೇಳಿದ್ದರು. ಅದಕ್ಕಾಗಿಯೇ ಶಿಕ್ಷಣದಿಂದ ಬಲಯುತರಾಗಿರಿ ಎಂದು ಸಾರಿದ್ದರು. ಕ್ರಾಂತಿ, ತತ್ವ ಸಂದೇಶದ ಮೂಲಕ ಬಿಲ್ಲವ ಸಮುದಾಯಕ್ಕೆ ಸಮಾಜದ ಬಾಗಿಲನ್ನು ತೆರೆಸಿದವರು. ಜಗತ್ತಿಗೆ ಬೆಳಕು ತೋರಿದ ನಾರಾಯಣ ಗುರುಗಳ ತತ್ವ ಸಿದ್ದಾಂತಗಳು ವಿಶ್ವಮಟ್ಟದಲ್ಲಿ ಪ್ರಚಲಿತವಾಗಿರುವುದು ನಮಗೆ ಹೆಮ್ಮೆಯಾಗಿದೆ. ಅವರು ಗುರುಗಳಾಗಿದ್ದಾರೆ. ಅವರ ತತ್ವವನ್ನು ಎಲ್ಲರೂ ಪಾಲಿಸೋಣ ಎಂದು ಪ್ರಕಾಶ ಪೂಜಾರಿ ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿದ ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಬೇಳಂಜೆ ಹರೀಶ್ ಪೂಜಾರಿ ಮಾತನಾಡಿ ನಮ್ಮ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಅವರಿಗೆ ನಿಗಮದ ಮೂಲಕ ಸಮುದಾಯಕ್ಕೆ ಸೇವೆ ನೀಡುವ ಆಶಯ ಹೊಂದಿದ್ದಾರೆ. ಅವರ ಸಾಮಾಜಿಕ ಜೀವನ ಯಶಸ್ಸು ದೊರೆಯಲಿ. ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಮಹೋತ್ಸವ ಯಶಸ್ವಿಗೊಳಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿ ನಾವೆಲ್ಲರೂ ಒಂದಾಗಿ ಬದುಕುವ ಎಂದು ಹಾರೈಸಿದರು.
ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ ಮಾತನಾಡಿ ಒಂದೇ ಜಾತಿ, ಒಂದೇ ಕುಲ ಒಂದೇ ದೇವರು ಎಂಬ ನಾರಾಯಣ ಗುರುಗಳ ತತ್ವಗಳನ್ನು ನಾವೆಲ್ಲರೂ ಪಾಲಿಸಿದಾಗ ಅತ್ಯುತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ದೇವರು ಜಗತ್ತಿಗೆ ಕಳುಹಿಸಿದ ಮಹಾನ್ ದಾರ್ಶನಿಕ ನಾರಾಯಣ ಗುರುಗಳು ಎಂದು ಹೇಳಿದರು. ಮಂಜುನಾಥ ಪೂಜಾರಿ ಯವರು ನಿಗಮದ ಅಧ್ಯಕ್ಷರಾಗಿರುವುದು ನಮ್ಮೇಲ್ಲರ ಪುಣ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾತ್ಮರ ಜಯಂತಿ ಮಾಡುವ ಮೂಲಕ ಸಾಮರಸ್ಯ ಸಮಾಜದಲ್ಲಿ ಮೂಡಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿರುವುದು ಶ್ಲಾಘನೀಯ. ಆ ಮೂಲಕ ಮತೀಯ ಗಲಭೆಗಳು ದೂರವಾಗಿ ಶಾಂತಿಯ ಸಮಾಜ ನಿರ್ಮಾಣವಾಗಲಿ ಎಂದು ಬೆಳ್ವೆ ಉದಯ ಕುಮಾರ್ ಪೂಜಾರಿ ಆಶಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಬ್ರಿ ತಹಶೀಲ್ಧಾರ್ ರಾಕೇಶ್ ಫ್ರಾನ್ಸಿಸ್ ಬ್ರೀಟ್ಟೋ ಮಾತನಾಡಿ ನಾರಾಯಣ ಗುರುಗಳ ಜಯಂತಿಯು ಮಾನವೀಯತೆಯ ಹಬ್ಬವಾಗಿದೆ. ಮಾನವರು ಒಂದೇ ಎನ್ನುವ ಗುರುಗಳ ಸಂದೇಶಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಸರ್ವರಿಗೂ ತಾಲ್ಲೂಕು ಆಡಳಿತ ಮೂಲಕ ಸೇವೆಯನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದರು.
ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆಯ ಶ್ರೀ ಗುರುರಕ್ಷಾ ಟ್ರಸ್ಟ್ ಮುದ್ರಾಡಿ ಮತ್ತು ಬೆಳ್ವೆ ಉದಯ ಕುಮಾರ್ ಪೂಜಾರಿಯವರು ಕೊಡಮಾಡಿದ ವಿಧ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷ ಅಣ್ಣಪ್ಪ ಪೂಜಾರಿ, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ, ಹೆಬ್ರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಶೇರಿಗಾರ್, ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ, ಕಾರ್ಕಳ ದೈಹಿಕ ಶಿಕ್ಷಣ ಅಧಿಕಾರಿ ರವಿಚಂದ್ರ ಕಾರಂತ್, ಅರಣ್ಯ ಇಲಾಖೆಯ ಅಧಿಕಾರಿ ಜಯರಾಮ ಪೂಜಾರಿ, ಪೊಲೀಸ್ ಇಲಾಖೆಯ ರಾಜ್ ಕುಮಾರ್, ಸಮುದಾಯದ ವಿವಿಧ ಪ್ರಮುಖರಾದ ಶೀನ ಪೂಜಾರಿ ಹೆಬ್ರಿ, ಉದಯ ಕುಮಾರ್ ಪೂಜಾರಿ ಬೆಳ್ವೆ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ಬೆಳ್ವೆಯ ರಾಜೀವ ಎಸ್ ಪೂಜಾರಿ ಬೆಳ್ವೆ, ಮುನಿಯಾಲಿನ ಮಂಜುನಾಥ ಪೂಜಾರಿ ಕಾಡುಹೊಳೆ, ಶಿವಪುರದ ದಿವಾನಂದ ಸಾಲ್ಯಾನ್, ಶಶಿಕಲಾ ಡಿ ಪೂಜಾರಿ, ಶಶಿಕಲಾ ಆರ್ ಪಿ, ಅದರ್ಶ ಪೂಜಾರಿ ಮುದ್ರಾಡಿ, ಸಮುದಾಯದ ವಿವಿಧ ಮುಖಂಡರು, ಪ್ರಮುಖರು, ಸಂಘಸಂಸ್ಥೆಗಳ ಪ್ರಮುಖರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೆಬ್ರಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ನಿರೂಪಿಸಿದರು. ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಪೂಜಾರಿ ಸ್ವಾಗತಿಸಿದರು. ಪ್ರಭಾಕರ ಪೂಜಾರಿ ವಂದಿಸಿದರು.





