Thursday, September 24, 2026
Homeಹೆಬ್ರಿಡಿಸೆಂಬರ್ ನಲ್ಲಿ ಪಡುಕುಡೂರು ಶಾಲಾ ಶತಮಾನೋತ್ಸವ ಸಂಭ್ರಮ: ಪದಾಧಿಕಾರಿಗಳ ಸಮಾಲೋಚನಾ ಸಭೆ.

ಡಿಸೆಂಬರ್ ನಲ್ಲಿ ಪಡುಕುಡೂರು ಶಾಲಾ ಶತಮಾನೋತ್ಸವ ಸಂಭ್ರಮ: ಪದಾಧಿಕಾರಿಗಳ ಸಮಾಲೋಚನಾ ಸಭೆ.

ಎಲ್ಲರೂ ಕೈಜೋಡಿಸಿ ಶತಮಾನೋತ್ಸವ ಸಂಭ್ರಮ ಯಶಸ್ವಿಗೊಳಿಸಿ : ಹರೀಶ್ ಶೆಟ್ಟಿ.

ಪಡುಕುಡೂರು : ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಇದೇ ಡಿಸೆಂಬರ್ ನಲ್ಲಿ ನಡೆಯಲಿದ್ದು ಶತಮಾನೋತ್ಸವ ಸಮಿತಿಯ ಸಭೆಯು ಭಾನುವಾರ ಅಧ್ಯಕ್ಷ ಭಾರವಿ ಶೆಟ್ಟಿ ಪಟೇಲರ ಮನೆ ಅಧ್ಯಕ್ಷತೆಯಲ್ಲಿ ನಡೆಯಿತು.

ನಮ್ಮ ಶಾಲೆಯ ಶತಮಾನೋತ್ಸವದ ಯಶಸ್ಸಿಗಾಗಿ ಹಳೇವಿದ್ಯಾರ್ಥಿಗಳು ಸೇರಿ ಎಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಬೇಕು, ಅತೀ ಹೆಚ್ಚು ದೇಣಿಗೆಯನ್ನು ಸಂಗ್ರಹಿಸಿ ಕೊಡುವ ತಂಡಕ್ಕೆ ಪ್ರಥಮ ದ್ವಿತೀಯ ಮತ್ತು ತೃತೀಯ ವಿಶೇಷ ಆಕರ್ಷಕವಾದ ಬಹುಮಾನವನ್ನು ನೀಡುವುದಾಗಿ ಸಮಿತಿಯ ಗೌರವಾಧ್ಯಕ್ಷರಾದ ಮುಂಬಯಿ ಉದ್ಯಮಿ ಪಡುಕುಡೂರು ಹರೀಶ್ ಶೆಟ್ಟಿ ಪ್ರಕಟಿಸಿದರು.

ಮುಖ್ಯ ಶಿಕ್ಷಕರಾದ ಹರೀಶ್ ಪೂಜಾರಿ ಮಾತನಾಡಿ ಶತಮಾನೋತ್ಸವ ಪೂರ್ವ ಸಿದ್ಧತೆಯ ಸಮಗ್ರ ಮಾಹಿತಿಯನ್ನು ನೀಡಿದರು.

ಶತಮಾನೋತ್ಸವಕ್ಕೆ ದೇಣಿಗೆ ಸಂಗ್ರಹಿಸಲು ಹಳೇವಿದ್ಯಾರ್ಥಿಗಳು, ಊರವರು ಹಾಗೂ ದಾನಿಗಳನ್ನು ಸಂಪರ್ಕಿಸಲು ಪಡುಕುಡೂರು, ಎಳ್ಳಾರೆ, ಕಜಾನೆ, ಮಾತಿಬೆಟ್ಟು ಮಾವಿನಕಟ್ಟೆ ಪ್ರದೇಶ ಸೇರಿ 6 ಉಪ ಸಮಿತಿಯನ್ನು ರಚಿಸಲಾಯಿತು. ಶತಮಾನೋತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದು ವಿಶೇಷ ಪ್ರಚಾರ ನೀಡುವ ಪ್ರಮುಖ ಉದ್ದೇಶದಿಂದ ವಿಶೇಷ ಸ್ಟಿಕ್ಕರ್ ಬಿಡುಗಡೆಯನ್ನು ಇದೇ 13 ರಂದು ನಡೆಸುವುದು. ಮತ್ತು ಅದೇ ದಿನ ಸಮಿತಿಯ ಸಭೆಯನ್ನು ಮಾಡಲು ನಿರ್ಧರಿಸಲಾಯಿತು.

ಸಂಚಾಲಕ ಪ್ರಸನ್ನ ಶೆಟ್ಟಿ, ವಿವಿಧ ಪ್ರಮುಖರಾದ ಪಡುಕುಡೂರು ಶಂಕರ ಶೆಟ್ಟಿ, ಸುಧಾಕರ ಶೆಟ್ಟಿ, ಕೇಶವ ನಾಯಕ್, ಹೃದಯ ಕುಮಾರ್ ಶೆಟ್ಟಿ, ಅಶೋಕ್ ಎಂ ಶೆಟ್ಟಿ, ದೊಡ್ಡಮನೆ ಕುಟುಂಬಸ್ಥರು, ಸಂದೇಶ ಶೆಟ್ಟಿ ಕಜಾನೆ, ಸಂದೀಪ್ ಶೆಟ್ಟಿ ಪಟೇಲರ ಮನೆ, ಶ್ರೀನಿವಾಸ ಆಚಾರ್ಯ, ಕಜಾನೆ ಸುಕುಮಾರ ಆಚಾರ್, ಎಸ್ ಡಿಎಂಸಿ ಅಧ್ಯಕ್ಷ ರವಿ ಶೆಟ್ಟಿ ಸೇರಿದಂತೆ ಹಲವರು ಮಾತನಾಡಿ ಸಲಹೆ ಸೂಚನೆ ನೀಡಿದರು.
ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಪ್ರಮುಖರು ಹಾಜರಿದ್ದರು.

ಗೌರವ ಕಾರ್ಯದರ್ಶಿ ರಂಜಿತಾ ಎಸ್ ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!