Wednesday, September 23, 2026
Homeಹೆಬ್ರಿವಿಂಗ್‌ ಕಮಾಂಡರ್‌ ಅನಿಲ್‌ ರಾಜ್‌ ತವರೂರಿಗೆ :ಸೆ.10 ರಂದು ಪೆರ್ಡೂರಿನಲ್ಲಿ ಭವ್ಯ ಸ್ವಾಗತಕ್ಕೆ ಸಿದ್ಧತೆ.

ವಿಂಗ್‌ ಕಮಾಂಡರ್‌ ಅನಿಲ್‌ ರಾಜ್‌ ತವರೂರಿಗೆ :ಸೆ.10 ರಂದು ಪೆರ್ಡೂರಿನಲ್ಲಿ ಭವ್ಯ ಸ್ವಾಗತಕ್ಕೆ ಸಿದ್ಧತೆ.

ಪೆರ್ಡೂರು : ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತವರೂರಿಗೆ ಆಗಮಿಸುತ್ತಿರುವ ವಿಂಗ್‌ ಕಮಾಂಡರ್‌ ಅನಿಲ್‌ ರಾಜ್‌ ಅವರಿಗೆ ಭವ್ಯ ಸ್ವಾಗತ ಕಾರ್ಯಕ್ರಮ ಇದೇ 10 ರಂದು ಸಂಜೆ 4 ಗಂಟೆಗೆ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ.

ಊರಿನ ಗೌರವಾನ್ವಿತ ನಾಗರಿಕರ ಸಮ್ಮುಖದಲ್ಲಿ ಗೌರವಾರ್ಪಣೆ ನಡೆಯಲಿದೆ. ಬಳಿಕ ಸೀನಿಯರ್‌ ಛೇಂಬರ್‌ ಇಂಟರ್‌ ನ್ಯಾಷನಲ್‌ ಅನಂತಸ್ಪರ್ಷ ಲೀಜನ್‌ ಪೆರ್ಡೂರು ವತಿಯಿಂದ ಸುಬ್ರಾಯ ಕಲ್ಯಾಣ ಮಂಟಪದಲ್ಲಿ ವಿಂಗ್‌ ಕಮಾಂಡರ್‌ ಅನಿಲ್‌ ರಾಜ್‌ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆಯಲಿದೆ.

ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ಶಾಂತಾರಾಮ ಸೂಡ, ಸೀನಿಯರ್‌ ಛೇಂಬರ್‌ ಇಂಟರ್‌ ನ್ಯಾಷನಲ್‌ ರಾಷ್ಟ್ರೀಯ ಪೂರ್ವಾಧ್ಯಕ್ಷ ಚಿತ್ರ ಕುಮಾರ್‌, ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಮೋದ್‌ ರೈ ಪಳಜೆ, ಅರ್ಚಕ ರಘುಪ್ರಸಾದ್‌ ಅಡಿಗ, ಎಪಿಟಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ವಿಠ್ಠಲ ಪೈ ಸಹಿತ ಗಣ್ಯರು ಭಾಗವಹಿಸುವರು. ಸೀನಿಯರ್‌ ಛೇಂಬರ್‌ ಇಂಟರ್‌ ನ್ಯಾಷನಲ್‌ ಅನಂತಸ್ಪರ್ಷ ಲೀಜನ್‌ ಪೆರ್ಡೂರು ಅಧ್ಯಕ್ಷ ಆನಂದ ಗೌಡ ಅಧ್ಯಕ್ಷತೆ ವಹಿಸುವರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!