ಮಡಾಮಕ್ಕಿ : ಕುಂದಾಪುರ ತಾಲೂಕು ಮಟ್ಟದ 14 ರ ವಯೋಮಾನದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಶೇಡಿಮನೆ ಅರಸಮ್ಮ ಕಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಗಳಿಸಿ ತಂಡದ ಐವರು ವಿದ್ಯಾರ್ಥಿನಿಯರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಮುಖ್ಯ ಶಿಕ್ಷಕಿ ಮೀನಾಕ್ಷಿ ರಾವ್ ದೈಹಿಕ ಶಿಕ್ಷಣ ಶಿಕ್ಷಕಿ ಉಷಾಲತ ಶೆಟ್ಟಿ, ತಂಡದ ವ್ಯವಸ್ಥಾಪಕಿ ಶೋಭಾ ಹಾಗೂ ಸಹ ಶಿಕ್ಷಕರು ಅತಿಥಿ ಶಿಕ್ಷಕರು. ತಂಡದ ಕೋಚ್. ಪ್ರೀತಮ್ ಶೆಟ್ಟಿ, ಆದಿತ್ಯ ಹಾಗೂ ರಾಘವೇಂದ್ರ ಸಹಕರಿಸಿದ್ದಾರೆ.
ಶಾಲಾಭಿವೃದ್ದಿ ಸಮಿತಿ, ಹಳೇ ವಿದ್ಯಾರ್ಥಿ ಸಂಘ, ಆರ್ಥಿಕ ಸಮಿತಿಯವರು ಪೋಷಕರು ಊರ ಪರ ಊರ ವಿದ್ಯಾಭಿಮಾನಿಗಳು ಮಕ್ಕಳಿಗೆ ಶುಭ ಹಾರೈಸಿದ್ದಾರೆ.




