Wednesday, September 23, 2026
Homeಹೆಬ್ರಿವಾಲಿಬಾಲ್ ಪಂದ್ಯಾಟ : ಪಡುಕುಡೂರು ಶಾಲಾ ಬಾಲಕಿಯರ ತಂಡದ ಹ್ಯಾಟ್ರಿಕ್ ಸಾಧನೆ.

ವಾಲಿಬಾಲ್ ಪಂದ್ಯಾಟ : ಪಡುಕುಡೂರು ಶಾಲಾ ಬಾಲಕಿಯರ ತಂಡದ ಹ್ಯಾಟ್ರಿಕ್ ಸಾಧನೆ.

ಪಡುಕುಡೂರು : 14 ರ ಒಳಗಿನ ವಯೋಮಾನದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಶತಮಾನೋತ್ಸವ ಸಂಭ್ರಮದ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ತಂಡವು ಹ್ಯಾಟ್ರಿಕ್ ಸಾಧನೆಯೊಂದಿಗೆ ಕಾರ್ಕಳ ತಾಲೂಕು ಮಟ್ಟಕ್ಕೆ ಪ್ರವೇಶಿಸಿ ಇರ್ವತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಂದ್ಯಾಟದಲ್ಲಿ ರನ್ನರ್ಸ್ ಆಗಿ ಮೂಡಿಬಂದಿದೆ.

ತಂಡದ ವಾಲಿಬಾಲ್ ತಾರೆಗಳಾದ ದೀಕ್ಷಾ, ಸುಚಿತಾ , ಪ್ರಣೀತಾ , ಅನನ್ಯಾ, ದೀಕ್ಷಿತಾ ಐವರು ಬಾಲಕಿಯರು ಜಿಲ್ಲಾ ಮಟ್ಟದ ಪಂದ್ಯಾವಳಿಗೆ ಕಾರ್ಕಳ ತಂಡನ್ನು ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ ಬಾಲಕಿಯರೊಂದಿಗೆ ಭಾಗವಹಿಸಲಿದ್ದು ಸತತ ಮೂರನೇ ಬಾರಿಗೆ ಐವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟವನ್ನು ಪ್ರತಿನಿಧಿಸುತ್ತಿದ್ದು ಪಡುಕುಡೂರಿನ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಶಾಲಾಭಿವೃದ್ಧಿ, ಶತಮಾನೋತ್ಸವ ಸಮಿತಿ ಮತ್ತು ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!