ಉಡುಪಿ : ವಿದ್ಯಾಭಾರತಿ ಕರ್ನಾಟಕ, ಉಡುಪಿ ಜಿಲ್ಲೆ ವತಿಯಿಂದ ನಡೆದ 19ನೇ ವಾರ್ಷಿಕ ಜಿಲ್ಲಾ ಶೈಕ್ಷಣಿಕ ಸಮ್ಮೇಳನ – 2026 ರ ಅಂಗವಾಗಿ ಆಯೋಜಿಸಿದ್ದ ‘ಗುರುಜಿ ಮಾತಾಜಿ’ ಜಿಲ್ಲಾ ಮಟ್ಟದ ಡ್ಯಾನ್ಸ್ ಎಕ್ಸ್‌ಟ್ರಾವಗಾಂಜಾ ಸ್ಪರ್ಧೆಯಲ್ಲಿ ಅಮೃತ ಭಾರತಿ ವಿದ್ಯಾ ಕೇಂದ್ರ ಸಿಬಿಎಸ್‌ಇ ಶಾಲೆಯ ಶಿಕ್ಷಕರ ತಂಡವು ಪ್ರಥಮ ಬಹುಮಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದೆ.
ವಿದ್ಯಾಭಾರತಿ ವಾರ್ಷಿಕ ಗೀತೆ ಆಧಾರಿತ ಈ ವಿಶೇಷ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಶಿಕ್ಷಕರ ತಂಡಗಳು ಭಾಗವಹಿಸಿದ್ದವು. ಅಮೃತ ಭಾರತಿ ವಿದ್ಯಾ ಕೇಂದ್ರದ 10 ಮಂದಿ ಶಿಕ್ಷಕರ ತಂಡವು 5 ನಿಮಿಷಗಳ ಕಾಲ ಸುಂದರ ಸಮನ್ವಯತೆ, ಸೃಜನಶೀಲ ಪ್ರಾಪ್ಸ್ ಬಳಕೆ ಮತ್ತು ಆಕರ್ಷಕ ವೇಷಭೂಷಣದೊಂದಿಗೆ ಮನಮೋಹಕ ನೃತ್ಯ ಪ್ರದರ್ಶನ ನೀಡಿ ತೀರ್ಪುಗಾರರ ಮನ ಗೆದ್ದಿತು.
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು. ವಿಜೇತ ಶಿಕ್ಷಕರ ತಂಡಕ್ಕೆ ಟ್ರೋಫಿ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಶಾಲೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ವಿಜೇತ ಶಿಕ್ಷಕರನ್ನು ಅಭಿನಂದಿಸಿದ್ದಾರೆ.



