ಮುದ್ರಾಡಿ : ಹೆಬ್ರಿ ತಾಲ್ಲೂಕು ಬಲ್ಲಾಡಿ ವಲಯದ ರಂಜಕಟ್ಟೆ 25ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸ್ವರ್ಣ ಶ್ರೀ ಸಂಘದ 10ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ನೆಕ್ಕರ್ ಬೆಟ್ಟು ಸಂತೋಷ ನಿವಾಸದಲ್ಲಿ ನೆರವೇರಿತು.
ಪ್ರಾರಂಭದಲ್ಲಿ ಶ್ರೀದೇವರಿಗೆ ಪೂಜಾ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.
ಸನ್ಮಾನ:
ಈ ಸಂದರ್ಭದಲ್ಲಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ
– ನಾಟಿ ಮದ್ದು ನೀಡುವ ಹಿರಿಯರಾದ ಸುಶೀಲ ರಾಜು ಪೂಜಾರಿ
– 25 ವರ್ಷದಿಂದ ಸಂಘದಲ್ಲಿ ನಿರಂತರ ಸೇವೆ ಸಲ್ಲಿಸಿದ ಗುಲಾಬಿ ಪೂಜಾರಿ
– ಸಂಘದ ಹಿರಿಯ ಸದಸ್ಯರಾದ ಜಯಲಕ್ಷ್ಮಿ
– ಭಜನಾ ಮಂಡಳಿಯ ಹಿರಿಯ ಸದಸ್ಯರಾದ ಬಾಣಮಾರಿ ಕೃಷ್ಣ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ವಲಯ ಜನಜಾಗೃತಿ ಅಧ್ಯಕ್ಷರಾದ ರತ್ನಾಕರ ಪೂಜಾರಿ, ವಲಯ ಅಧ್ಯಕ್ಷ ಯೋಗೀಶ್, ಹೆಬ್ರಿ ತಾಲೂಕು ಯೋಜನಾಧಿಕಾರಿ ರೇಷ್ಮಾ, ಹಿರಿಯರಾದ ಮುದ್ದು ಪೂಜಾರಿ, ಭಜನಾ ಮಂಡಳಿ ಅಧ್ಯಕ್ಷ ವಸಂತ ಕುಲಾಲ್ ಉಪಸ್ಥಿತರಿದ್ದರು.
ನೆಕ್ಕರ್ ಬೆಟ್ಟು ಸಂತೋಷ್ ಪೂಜಾರಿ ಸ್ವಾಗತಿಸಿದರು. ಮೇಲ್ವಿಚಾರಕರಾದ ಉಮೇಶ್ ನಿರೂಪಿಸಿದರು. ಸೇವಾ ಪ್ರತಿನಿಧಿ ಮಮತಾ ವಂದಿಸಿದರು.
ಕಾರ್ಯಕ್ರಮದಲ್ಲಿ 2 ಸಂಘಗಳ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.




