ಹೆಬ್ರಿ : ರೆಡ್ ಕ್ರಾಸ್ ಹೆಬ್ರಿ ತಾಲ್ಲೂಕು ಶಾಖೆ ಮತ್ತು ಅಲಯನ್ಸ್ ಕ್ಲಬ್ ಹೆಬ್ರಿ ಇದರ ಸಹಯೋಗದಲ್ಲಿ ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗದ ಸಭಾಂಗಣದಲ್ಲಿ, ” ಪ್ರಥಮ ಚಿಕಿತ್ಸಾ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ” ಕಾರ್ಯಾಗಾರ ನಡೆಯಿತು.
ಕಾಲೇಜಿನ ಉಪ ಪ್ರಾಂಶುಪಾಲ ದಿವಾಕರ ಮರಕಾಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ಸುರೇಶ್ ನಾಯಕ್ ಅವರು ಗಾಯಗಳಾದರೆ, ಹಾವು ಕಚ್ಚಿದರೆ, ಹೃದಯಾಘಾತ ವಾದರೆ, ಗಂಟಲಲ್ಲಿ ಗಟ್ಟಿ ವಸ್ತು ಸಿಕ್ಕಿ ಹಾಕಿಕೊಂಡರೆ, ತಲೆಸುತ್ತು ಬಂದು ಬಿದ್ದರೆ, ಹೀಗೆ ಹಲವಾರು ವಿಷಯಗಳ ಬಗ್ಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ಹೇಗೆ ನೀಡುವುದು ಎಂದು ವಿವರವಾಗಿ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.
ಡಾ.ಸುರೇಶ್ ನಾಯಕ್ -ಆಡಳಿತ ವೈದ್ಯಾಧಿಕಾರಿಗಳು, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳಲಗಿರಿ ಉಡುಪಿ, ಡಾ. ವಿದ್ಯಾಧರ ಹೆಗ್ಡೆ ಉಪಸಭಾಪತಿಗಳು, ಅಲಯನ್ಸ್ ಕ್ಲಬ್ ಹೆಬ್ರಿ ಅಧ್ಯಕ್ಷ ಬಾಲಚಂದ್ರ ಎಂ, ಕೋಶಾಧಿಕಾರಿ ಪ್ರಕಾಶ್ ಕುಮಾರ್ ಶೆಟ್ಟಿ, ಸಭಾಪತಿ ವೀಣಾ ಆರ್ ಭಟ್ ಉಪಸ್ಥಿತರಿದ್ದರು.
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಜಿನ ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಎಸ್ ಮಾತನಾಡಿದರು.
ಹೆಬ್ರಿ ರೆಡ್ ಕ್ರಾಸ್ ಸಂಸ್ಥೆಯ ಉಪಸಮಿತಿಯ ಸಂಚಾಲಕ ಮಂಜುನಾಥ ಕುಲಾಲ್ ನಿರೂಪಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ವೀಣಾ ಆರ್ ಭಟ್ ಸ್ವಾಗತಿಸಿ, ಪ್ರಕಾಶ್ ಕುಮಾರ್ ಶೆಟ್ಟಿ ವಂದಿಸಿದರು.
ಸೋನಿ ಪಿ.ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳ ಪರಿಚಯ ವಾಚಿಸಿದರು. ನಮ್ಮ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರು, ಉಪಸಮಿತಿಯ ಸಂಚಾಲಕರು ,ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶಿಕ್ಷಕರಾದ ಶ್ರೀ ಅಭಿಲಾಷ್ ಸಹಕರಿಸಿದರು.
ಶಾಲೆಯ NCC, ಸ್ಕೌಟ್ಸ್, ಗೈಡ್ಸ್ ನ 60 ಜನ ಮಕ್ಕಳು ಉಪಸ್ಥಿತರಿದ್ದು ಕಾರ್ಯಕ್ರಮದ ಉಪಯೋಗವನ್ನು ಪಡೆದು ಕೊಂಡರು.



