ಪೆರ್ಡೂರು : ಹೆಬ್ರಿಯ ಕಾರ್ಯಕ್ರಮ ಮುಗಿಸಿಕೊಂಡು ಉಡುಪಿಗೆ ಸಾಗುತ್ತಿರುವಾಗ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಶುಕ್ರವಾರ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವತಿಯಿಂದ ದಾರಿ ಮಧ್ಯೆ ಗೌರವಿಸಲಾಯಿತು. ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಕೆ. ಜಯಪ್ರಕಾಶ್ ಹೆಗ್ಡೆ, ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಶಾಂತರಾಮ ಸೂಡ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಲಾಲ್ ಪಕ್ಕಾಲ್ ಹಾಗೂ ವಿವಿಧ ಮುಖಂಡರು, ಸಮಿತಿಯ ಸದಸ್ಯರು ಸೇರಿ ನೂರಾರು ಮಂದಿ ಸೇರಿದ್ದರು.




