Sunday, November 8, 2026
Homeಕುಚ್ಚೂರು ಗ್ರಾಮ ಪಂಚಾಯತ್‌ಹೆಬ್ರಿ ತಾಲೂಕಿನಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಿನ ಅವ್ಯವಸ್ಥೆ -  ವಿರುದ್ಧ ಬೃಹತ್ ಸಾರ್ವಜನಿಕ ಪ್ರತಿಭಟನೆ.

ಹೆಬ್ರಿ ತಾಲೂಕಿನಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಿನ ಅವ್ಯವಸ್ಥೆ –  ವಿರುದ್ಧ ಬೃಹತ್ ಸಾರ್ವಜನಿಕ ಪ್ರತಿಭಟನೆ.

ನವಂಬರ್‌ 5ರಂದು  10 ಗಂಟೆಗೆ ಹೆಬ್ರಿ ಸರ್ಕಲ್‌ ಬಳಿ ಪ್ರತಿಭಟನೆ.

ಹೆಬ್ರಿ : ಹೆಬ್ರಿ ತಾಲೂಕಿನಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ವಿರುದ್ಧ ಬೃಹತ್ ಸಾರ್ವಜನಿಕ ಪ್ರತಿಭಟನೆ ನವಂಬರ್‌ 5 ರಂದು  10 ಗಂಟೆಗೆ ಹೆಬ್ರಿ ಸರ್ಕಲ್‌ ಬಳಿ ನಡೆಯಲಿದೆ.

ಹೆಬ್ರಿಯ ನಮ್ಮ ಮನವಿಯನ್ನು ಉಡುಪಿ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಡಬೇಕು ಎಂದು ಪ್ರಗತಿಪರ ಹೋರಾಟಗಾರ ಶ್ರೀಕಾಂತ್‌ ಪೂಜಾರಿ ಕುಚ್ಚೂರು ಒತ್ತಾಯಿಸಿದ್ದಾರೆ.

ಹೆಬ್ರಿ ತಾಲೂಕಿನ ಸರಕಾರಿ ಕಚೇರಿಗಳಲ್ಲಿ  ಹೆಚ್ಚುತ್ತಿರುವ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದರೂ ಅಧಿಕಾರಿಗಳು ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ.

1, ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಹೆಸರಿಗೆ ಮಾತ್ರ ದೊಡ್ಡದಿದ್ದು , ವ್ಯವಸ್ಥೆಗಳು, ಹಾಗೂ ಸರಿಯಾದ ಚಿಕಿತ್ಸೆಗಳು ಸಿಗದೇ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಉಂಟಾಗಿದ್ದು ಕೂಡಲೇ ಸದ್ರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಸಮಸ್ಯೆಗಳನ್ನು ಪಡಿಸಬೇಕಾಗಿದೆ.

2. ಹೆಬ್ರಿ ತಾಲೂಕಿನ ತಾಲೂಕು ಕಚೇರಿ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗಳಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕೊರತೆಯಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗಿ ತೊಂದರೆ ಆಗುತ್ತಿದೆ.

3. ಹೆಬ್ರಿ ತಾಲೂಕು ಪಂಚಾಯತ್ ಎಂ ಆರ್ ಎಫ್ ಘಟಕಕ್ಕೆ ಬೆಂಕಿ ಬಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿರುತ್ತದೆ. ಇದರ ಬಗ್ಗೆ ಸೂಕ್ತ ತನಿಖೆ ಇಲ್ಲದೆ ಕಾಟಚಾರಕ್ಕೆ ವರದಿ ಮಾಡಿದ್ದು, ಅದನ್ನು ಕೂಡಲೇ ಮತ್ತೆ ಪ್ರಾರಂಭಿಸುವ ಕುರಿತು, ವಿಳಂಬವಾಗಿ ಹೆಬ್ರಿ ಸುತ್ತಮುತ್ತ ಕಸ ಎಲ್ಲೆಂದರಲ್ಲಿ ಕಸದ ರಾಶಿ ಆಗುತ್ತಿದೆ.

4) ಹೆಬ್ರಿಯ ಅಂಚೆ ಕಚೇರಿಗೆ ಸ್ವಂತ ನಿವೇಶನ ಇದ್ದರು ಖಾಸಗಿ ಕಟ್ಟಡ ಎರಡನೇ ಮಹಡಿಗೆ ಹೋಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಅಂಚೆ ಕಚೇರಿಗೆ ವಯೋ ವೃದ್ಧರು, ಅನಾರೋಗ್ಯ ಪೀಡಿತರಿಗೆ ಮೆಟ್ಟಿಲುಗಳನ್ನು ಹತ್ತಿ ಹೋಗಲು ತುಂಬಾ ಕಷ್ಟವಾಗಿದೆ. ಅಂಚೆ ಕಚೇರಿಯ ನಿವೇಶನದಲ್ಲಿ ಕೂಡಲೇ ಕಟ್ಟಡ ನಿರ್ಮಿಸಬೇಕು.

5) ಹೆಬ್ರಿ ತಾಲೂಕಿನ ತಾಲೂಕು ಕಚೇರಿ ಅಥವಾ ತಾಲೂಕು ಪಂಚಾಯತ್ ಕಚೇರಿಯಲ್ಲಿ ಆಧಾರ್ ಕಾರ್ಡ್  ಕೇಂದ್ರವನ್ನು ಶಾಶ್ವತವಾಗಿ ತೆರೆದು ಕಾರ್ಯನಿರ್ವಹಿಸುವಂತೆ ಮಾಡಬೇಕು.

6) ಹೆಬ್ರಿಯ ಪೇಟೆಯಲ್ಲಿ ಚರಂಡಿಯ ವ್ಯವಸ್ಥೆಗಳು ಇಲ್ಲದೆ ರಸ್ತೆಗಳಲ್ಲಿ ಸಣ್ಣ ಮಳೆ ಬಂದರೆ ಕೆರೆಗಳಂತೆ ಆಗುತ್ತಿದ್ದು, ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಗಳು ಆಗುತ್ತಿದೆ.

7)  ಕಸ್ತೂರಿ ರಂಗನ್ ವರದಿಯ ಬಗ್ಗೆ ಗ್ರಾಮ, ಗ್ರಾಮಗಳಲ್ಲಿ ಸಭೆ ನಡೆಸಿ ಜನರ ಸಮಸ್ಯೆಗಳ ಬಗ್ಗೆ ವರದಿಯನ್ನು ಸರ್ಕಾರಕ್ಕೆ ಕಳುಹಿಸದೆ ಇರುವ ಕುರಿತು*

8) 169ಎ ರಾಷ್ಟ್ರೀಯ ಹೆದ್ದಾರಿ ಹೆಬ್ರಿ ಪೇಟೆಯ ಮಧ್ಯದಲ್ಲಿ ಹಾದು ಹೋಗುವುದರಿಂದ ಶಾಲಾ ಮಕ್ಕಳಿಗೆ, ಸ್ಥಳೀಯ ವಾಹನ ಸವಾರರಿಗೆ, ನಾಗರಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಕೂಡಲೇ ರಸ್ತೆಯನ್ನು  ವಿಸ್ತರಣೆ ಮಾಡಬೇಕು.

9) ಹೆಬ್ರಿಯ ಸರ್ಕಾರಿ ಬಸ್ ನಿಲ್ದಾಣದ ಕಾಮಗಾರಿ ಅಂದಾಜು 4 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಶೀಘ್ರವಾಗಿ ಪೂರ್ಣಗೊಳಿಸಬೇಕು.

10) ಅಕ್ರಮ ಸಕ್ರಮದ 94ಸಿ ಹಾಗೂ 57 ಅರ್ಜಿಗಳು ವಿಲೇವಾರಿಯಾಗದೆ ಬಡ ಜನರಿಗೆ ಕೃಷಿಕರಿಗೆ ತೊಂದರೆಯಾಗುತ್ತಿದ್ದು, ಶೀಘ್ರವಾಗಿ ಇತ್ಯರ್ಥ ಮಾಡಬೇಕು*

11) ಹೆಬ್ರಿ ತಾಲೂಕಿನಲ್ಲಿ ಅಗ್ನಿಶಾಮಕ ಘಟಕಕ್ಕೆ ಮಂಜೂರಾದ ನಿವೇಶನದಲ್ಲಿ ಅಗ್ನಿಶಾಮಕ ಘಟಕವನ್ನು ಪ್ರಾರಂಭಿಸಬೇಕು.

12)  ಹೆಬ್ರಿ ತಾಲೂಕಿನ ಜನರು ಸಬ್ ರಿಜಿಸ್ಟರ್ ಕಚೇರಿಗೆ ಹೋಗಬೇಕೆಂದರೆ ದೂರದ  ಉಡುಪಿ, ಕಾರ್ಕಳ ಬ್ರಹ್ಮಾವರಕ್ಕೆ ಹೋಗಬೇಕಾದ ಪರಿಸ್ಥಿತಿ ಇದ್ದು, ಕೂಡಲೇ ಹೆಬ್ರಿ ತಾಲೂಕಿಗೆ ಶೀಘ್ರವಾಗಿ ಸಬ್ ರಿಜಿಸ್ಟರ್ ಕಚೇರಿ ರಚನೆ ಮಾಡಿ ಕಾರ್ಯನಿರ್ವಹಿಸಂತೆ ಮಾಡಬೇಕು.

13) ಪ್ರಾದೇಶಿಕ ಸಾರಿಗೆ ಕಚೇರಿಯ ಘಟಕವನ್ನು ತೆರೆಯಬೇಕು.

14) ವಾರಾಹಿ ನೀರಾವರಿ ಅವ್ಯವಸ್ಥೆಗಳನ್ನು ಸರಿಪಡಿಸಬೇಕು.

15 – ಅರಣ್ಯ ಇಲಾಖೆಯಿಂದ ಅರಣ್ಯ ಅಂಚಿನ ಪ್ರದೇಶ ಜನರಿಗೆ ಆಗುತ್ತಿರುವ  ಸಮಸ್ಯೆಯನ್ನು ಸರಿಪಡಿಸಬೇಕು. ಹೀಗೆ ಹಲವು ಬೇಡಿಕೆಯನ್ನು ಶ್ರೀಘ್ರವಾಗಿ ಸರಿಪಡಿಸಬೇಕು,

ಸಂಬಂಧಿಸಿದ ಇಲಾಖೆಗಳು ಹಾಗೂ ಅಧಿಕಾರಿಗಳು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಇತ್ಯರ್ಥಗೊಳಿಸ ಕೊಡಬೇಕಾಗಿ ಎಂದು ಶ್ರೀಕಾಂತ್‌ ಪೂಜಾರಿ ಒತ್ತಾಯಿಸಿದ್ದಾರೆ.

ಹೆಬ್ರಿ ತಾಲ್ಲೂಕಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿ ಹೆಬ್ರಿಯ ಸಮಸ್ಯೆಗಳನ್ನು ಬಗೆಹರಿಸೋಣ  ಎಂದು ಶ್ರೀಕಾಂತ್‌ ಪೂಜಾರಿ ಕರೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!