ಕುಚ್ಚೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಕೆಪಿಎಸ್ ಕೊಕ್ಕರ್ಣ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹೆಬ್ರಿಯ ಕುಚ್ಚೂರು ಹೆರ್ಗ ವಿಠ್ಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 12 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದು ಬೆಂಗಳೂರಿನಲ್ಲಿ ನವಂಬರ್ ೦೨ ರಿಂದ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
ಚಿತ್ರದಲ್ಲಿ ವಿದ್ಯಾರ್ಥಿಗಳಾದ ರೋಷಿತ್, ಪವನ್, ಪ್ರಸನ್ನ, ಪ್ರಥಮ್, ಸುಧಾಕರ ,ಪ್ರಸನ್ನ ,ಧೃತಿ ಅಕ್ಷಿತಾ,ತೃಪ್ತಿ ,ಕೃತಿಕಾ ,ಶ್ರೇಯ ಹಾಗೂ ಸೌಜನ್ಯ ಅವರೊಂದಿಗೆ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಭಾವತಿ ದೈಹಿಕ ಶಿಕ್ಷಕಿ ಕಮಲಿನಿ ಸಹ ಶಿಕ್ಷಕರಾದಕ ಜಯರಾಮ ಎನ್.ಬಿ, ಶಿವಾನಂದ ಶೆಟ್ಟಿ ಹಾಗೂ ತುಳಸಿ ಅವರಿದ್ದಾರೆ.



