Sunday, October 18, 2026
Homeಹೆಬ್ರಿಹೆಬ್ರಿ : ಶ್ರೀ ಡಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ನಿಲಯದಲ್ಲಿ ನಾಯಕತ್ವ ಸ್ವಯಂ...

ಹೆಬ್ರಿ : ಶ್ರೀ ಡಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ನಿಲಯದಲ್ಲಿ ನಾಯಕತ್ವ ಸ್ವಯಂ ನಿರ್ವಹಣೆ ವಿದ್ಯಾರ್ಥಿ ಸದನ ರಚನೆ.

ಹೆಬ್ರಿ : ಹೆಬ್ರಿಯ ಶ್ರೀ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ನಿಲಯದಲ್ಲಿ ನಾಯಕತ್ವ ಸ್ವಯಂ ನಿರ್ವಹಣೆಯ ಗುಣಗಳನ್ನು ಬೆಳೆಸಲು ಪ್ರತಿಯೊಬ್ಬ ವಿದ್ಯಾರ್ಥಿಗೂ ಜವಾಬ್ದಾರಿ ನೀಡಲು ವಿವಿಧ ಸಮಿತಿಗಳನ್ನು ರಚಿಸಲಾಯಿತು. ನಿಲಯಾದ ಮುಖ್ಯ ನಾಯಕಿಯಾಗಿ ಸಂಗೀತ ಡಿ ಎಂ ಆಯ್ಕೆಯಾದರು. ಹಾಸ್ಟೇಲ್‌ ಒಟ್ಟಾರೆ ಉಸ್ತುವಾರಿ ಮತ್ತು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ನಡುವೆ ಸೇತುವೆಯಾಗಿ ಕೆಲಸ ಮಾಡುವುದರ ಜೊತೆಗೆ ಹಾಸ್ಟೇಲ್‌ನಲ್ಲಿ ಶಿಸ್ತು ಹಾಗೂ ನಾಯಕತ್ವ ಜವಾಬ್ದಾರಿಯ ಅರಿವಿಗಾಗಿ ವಿದ್ಯಾರ್ಥಿ ಸದನ’ವನ್ನು ರಚಿಸಲಾಯಿತು. ಆಯ್ಕೆಗೊಂಡ ವಿದ್ಯಾರ್ಥಿ ಸದನದ ನಾಯಕರುಗಳು ಮತ್ತು ಸದಸ್ಯರು ಸತ್ಯ ನಿಷ್ಠೆ ಹಾಗೂ ನಿಷ್ಪಕ್ಷಪಾತವಾಗಿ ತಮ್ಮ ನಾಯಕತ್ವವನ್ನು ನಿರ್ವಹಿಸುವುದಾಗಿ ಪ್ರಮಾಣವಚನ ಸ್ವೀಕರಿಸಿದರು. ನಿಲಯದ ಮೇಲ್ವೀಚಾರಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!