Sunday, October 18, 2026
Homeಹೆಬ್ರಿಮುನಿಯಾಲು : ಅಕ್ರಮ ಕೋಳಿ ಅಂಕ ನಡೆಸುತ್ತಿದ್ದ ಅಡ್ಡೆಗೆ ಪೊಲೀಸರ ದಾಳಿ : ಹಲವರ ಬಂಧನ:...

ಮುನಿಯಾಲು : ಅಕ್ರಮ ಕೋಳಿ ಅಂಕ ನಡೆಸುತ್ತಿದ್ದ ಅಡ್ಡೆಗೆ ಪೊಲೀಸರ ದಾಳಿ : ಹಲವರ ಬಂಧನ: ಜುಗಾರಿಗೆ ಬಳಸಿದ್ದ ಬೈಕ್ ಹಾಗೂ ಕೋಳಿಗಳು ವಶ.

ಕೆಲ್ ಟೆಕ್ ಕಂಪೆನಿಯ ಆವರಣಕ್ಕೆ ಓಡಿದ ಕೋಳಿ ಅಂಕ ನಿರತರು; ಬೆಚ್ಚಿದ ಕಂಪೆನಿ ಸಿಬ್ಬಂದಿ

ಹೆಬ್ರಿ : ಹೆಬ್ರಿ ತಾಲ್ಲೂಕಿನ ವರಂಗ ಗ್ರಾಮದ ತಲಮನೆ ಎಂಬಲ್ಲಿ ಅಕ್ರಮವಾಗಿ ಮೊಬೈಲ್ ಮೂಲಕ ಸಂಪರ್ಕ ಸಾಧಿಸಿ ಕೋಳಿ ಅಂಕ ನಡೆಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೆದ ಹೆಬ್ರಿ ಪೊಲೀಸರ ತಂಡ ದಾಳಿ ನಡೆಸಿ 15ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದು, ಆಟಕ್ಕೆ ಬಳಸಲಾದ ಹುಂಜ ಕೋಳಿಗಳನ್ನು ಹಾಗೂ ಹಲವು ಬೈಕ್ ಗಳನ್ನು ಸೀಜ್ ಮಾಡಿದ್ದಾರೆ.

ಪೊಲೀಸರು ದಾಳಿ ನಡೆಸಿದ ತಕ್ಷಣವೇ 10 ರಿಂದ 12 ಜನರ ತಂಡ ಕೋಳಿಗಳ ಸಹಿತ ದಿಕ್ಕಾಪಾಲಾಗಿ ಓಡಿದ್ದಾರೆ. ಈ ಪೈಕಿ ಕೆಲವರು ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೋಳಿಗಳ ಜೊತೆಗೆ ವರಂಗದ ಕೆಲ್ ಟೆಕ್ ಎನರ್ಜೀಸ್ ಕಂಪೆನಿಯ ಆವರಣಕ್ಕೆ ನುಗ್ಗಿದ್ದರು. ಕಂಪೆನಿಯ ಕಟ್ಟಡದೊಳಗೆ ಅಪರಿಚಿತರು ಅಕ್ರಮವಾಗಿ ನುಗ್ಗಿದಾಗ ಬೆಚ್ಚಿದ ಅಲ್ಲಿನ ಸಿಬ್ಬಂದಿಗಳು ತಕ್ಷಣವೇ ಹೆಬ್ರಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಇತ್ತ ಪರಾರಿಯಾದವರ ಹುಡುಕಾಟದಲ್ಲಿದ್ದ ಪೊಲೀಸರು ತಕ್ಷಣವೇ ಕಂಪೆನಿಗೆ ಧಾವಿಸಿ ಪರಿಶೀಲಿಸಿದಾಗ ಕೊಳಿ ಅಂಕದಲ್ಲಿ ತಪ್ಪಿಸಕೊಂಡವರು ಎಂದು ಖಚಿತಪಡಿಸಿದ್ದಾರೆ. ಬಳಿಕ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!