ಹೆಬ್ರಿ : ನವಕಿರಣ ಚಿಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ 6ನೇ ಶಾಖೆ ಹೆಬ್ರಿಯಲ್ಲಿ ಉದ್ಘಾಟನೆಗೊಂಡಿತು. ನೂತನ ಕಚೇರಿ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ, ಉದ್ಯಮಿ ಕಟ್ಟಡದ ಮಾಲಕ ಅನಂತ್ ನಾಯಕ್ ಮಾಡಿದರು.
ಸಂಸ್ಥೆಯು 12 ವರ್ಷಗಳಿಂದ ನಡೆಯುತ್ತಿರುವುದು ಪ್ರಾಮಾಣಿಕ ಸೇವೆಗೆ ಕೈಗನ್ನಡಿ, ಸಂಸ್ಥೆಯ ಸಿಬ್ಬಂದಿಗಳ ಸರಳತೆ ಇತರರಿಗೆ ಆದರ್ಶಮಯವಾಗಿದೆ ಎಂದರು.
ಅನಂತ ನಾಯಕ್ ಮಾತನಾಡಿ, ಮುಂದಿನ ದಿನಗಳಲ್ಲಿ ಹೆಬ್ರಿ ತಾಲೂಕಿನಲ್ಲಿ ಉತ್ತಮ ವ್ಯವಹಾರ ಮಾಡುವ ಬಗ್ಗೆ ಯಾವುದೇ ಸಂದೇಹ ಇಲ್ಲ, ಇದು ನಿರಂತರವಾಗಿ ನಡೆದು ಬೆಳಗಲಿ ಎಂದು ಹಾರೈಸಿದರು.
ಚಿಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕೆ. ಸಂಸ್ಥೆಯು ನಡೆದು ಬಂದ ದಾರಿ ಮತ್ತು ಮುಂದಿನ ಗುರಿಗಳ ಬಗ್ಗೆ ಮಾಹಿತಿ ನೀಡಿದರು.
ಹೆಬ್ರಿ ಶಾಖೆಯ ಮ್ಯಾನೇಜರ್ ಕರುಣಾಕರ ಆಚಾರ್ಯ ನಿರ್ವಹಿಸಿ ಸ್ವಾಗತಿಸಿದರು. ಸಭೆಯಲ್ಲಿ ಜಿಲ್ಲೆಯ ಉಡುಪಿ, ಬ್ರಹ್ಮಾವರ, ಕೋಟ, ಕುಂದಾಪುರ, ಬೈಂದೂರು ಶಾಖೆಯ ಮ್ಯಾನೇಜರ್ ಮತ್ತು ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬೆಳಿಗ್ಗೆ ಗಣಹೋಮ ಮತ್ತು ಸಾಯಂಕಾಲ ದುರ್ಗಾ ನಮಸ್ಕಾರ ಪೂಜೆ ನಡೆಸಲಾಯಿತು.



