Sunday, October 18, 2026
Homeಹೆಬ್ರಿಶ್ವೇತಾ ಪ್ರಸನ್ನ ಶೆಟ್ಟಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ.

ಶ್ವೇತಾ ಪ್ರಸನ್ನ ಶೆಟ್ಟಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ.

ಹೆಬ್ರಿ : ಪೆರ್ಡೂರು ಮೂಲದ ಪುಣೆಯಲ್ಲಿ ಉದ್ಯಮಿಯಾಗಿರುವ ಪ್ರಸನ್ನ ಶೆಟ್ಟಿ ಅವರ ಪತ್ನಿ
ಶ ಶ್ವೇತಾ ಪಿ.ಶೆಟ್ಟಿ ಅವರು ಎ.ಜೆ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಹಾಗೂ ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಶಾಂತಕುಮಾರಿ. ಕೆ., ಇವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ” ಎ ಸ್ಟಡಿ ಆಫ್ ಸಿಂಗಲ್ ಅಂಡ್ ಡಬಲ್ ಇಂಟಿಗ್ರಲ್ಸ್ ಇನ್ವಾಲ್ವಿಂಗ್ ಹೈಪರ್‌ಜಿಯೋಮೆಟ್ರಿಕ್ ಅಂಡ್ ಜನರಲೈಸ್ಡ್ ಹೈಪರ್‌ಜಿಯೋಮೆಟ್ರಿಕ್ ಫಂಕ್ಷನ್ಸ್ ವಿದ್ ಅಪ್ಲಿಕೇಶನ್ಸ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯು 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಮಂಗಳೂರಿನ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರ ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಗಣಿತಶಾಸ್ತ್ರದ ಜರ್ನಲ್‌ಗಳಲ್ಲಿ ಪ್ರಕಟಗೊಂಡಿವೆ.

ಇವರು ಎರ್ಮಾಳು ಪುಚೊಟ್ಟು ದಿ| ಸುಂದರ್ ಶೆಟ್ಟಿ ಮತ್ತು ಪಾದೂರು ಕರ್ಮರಪಾಡಿ ವತ್ಸಲಾ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!