Sunday, October 18, 2026
Homeಹೆಬ್ರಿಆಗುಂಬೆ ಘಾಟಿಯಲ್ಲಿ ಕಂದಕಕ್ಕೆ ಉರುಳಿದ ಲಾರಿ.

ಆಗುಂಬೆ ಘಾಟಿಯಲ್ಲಿ ಕಂದಕಕ್ಕೆ ಉರುಳಿದ ಲಾರಿ.

ಲಾರಿಯಲ್ಲೇ ಸಿಲುಕಿದ್ದ ಚಾಲಕ – ಕ್ಲೀನರ್‌ ಜಿಗಿದು ಪಾರು !

ಹೆಬ್ರಿ : ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಆಗುಂಬೆ ಘಾಟಿಯ 2ನೇ ಸುತ್ತಿನಲ್ಲಿ ಗುರುವಾರ ರಾತ್ರಿ 12.30ರ ಹೊತ್ತಿಗೆ ಲಾರಿ ( ಈಚರ್‌ ಗಾಡಿ ) ಕಂದಕಕ್ಕೆ ಉರುಳಿದೆ. ಚಾಲಕ ಲಾರಿಯಲ್ಲೇ ಸಿಲುಕ್ಕಿದ್ದರು. ಹೆಬ್ರಿಯ ಕುಚ್ಚೂರು ಪ್ರಭಾಕರ ಪೂಜಾರಿ ನೇತ್ರತ್ವದಲ್ಲಿ ಕ್ರೇನ್‌ ಮೂಲಕ ಲಾರಿಯನ್ನು ಮುಂಜಾನೆ 3:30ಕ್ಕೆ ಮೇಲೆತ್ತಲಾಯಿತು. ಲಾರಿ ಘಾಟಿಯಿಂದ ಕಂದಕಕ್ಕೆ ಬೀಳುತ್ತಿದ್ದಂತೆ ಕ್ಲೀನರ್‌ ಜಿಗಿದು ಪಾರಾಗಿದ್ದಾರೆ. ಲಾರಿ ಚಾಲಕ ಲಾರಿಯಲ್ಲೇ ಸಿಲುಕಿದ್ದರು. ಲಾರಿಯನ್ನು ಮೇಲೆತ್ತಿದ ಬಳಿಕ ಚಾಲಕನನ್ನು ಹೊರ ತೆಗೆಯಲಾಯಿತು. ಚಾಲಕನ ಬಲಕಾಲು ಪಾದದ ಸಮೀಪ ಕಟ್‌ ಆಗಿದ್ದು 3 ಬೆರಳುಗಳು ಕೂಡ ಕಟ್‌ ಆಗಿವೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಬ್ರಿ ಸಬ್‌ ಇನ್ಸ್‌ ಫೆಕ್ಟರ್‌ ಲೋಹಿತ್‌ ಕುಮಾರ್‌ ಮತ್ತು ತಂಡ ಸ್ಥಳದಲ್ಲಿದ್ದು ಸಹಕಾರ ನೀಡಿದರು. ಘಾಟಿಯ ಹಲವೆಡೆ ತಡೆಗೋಡೆ ಇಲ್ಲದೆ ವಾಹನಗಳು ಕಂದಕಕ್ಕೆ ಉರುಳುವ ಘಟನೆಗಳು ಸಂಭವುಸುತ್ತಿವೆ. ಇತ್ತೀಚೆಗೆ ಪಿಕ್‌ ಅಪ್‌ ವಾಹನ ಕೂಡ ಅದೇ ಜಾಗದಲ್ಲೇ ಉರುಳಿತ್ತು. ಸೂಕ್ತ ತಡೆಗೋಡೆಯನ್ನು ನಿರ್ಮಿಸುವಂತೆ ಸಮಾಜ ಸೇವಕ ಕುಚ್ಚೂರು ಪ್ರಭಾಕರ ಪೂಜಾರಿ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!