ಮಹಿಳಾ ಸಬಲೀಕರಣಕ್ಕೆ ಮಹಾತ್ಮ ಗಾಂಧೀಜಿ ಕೊಡುಗೆ ಅಪಾರ : ಜಯಂತಿ ಎನ್.
ಹೆಬ್ರಿ : ಹೆಬ್ರಿ ಶ್ರೀ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ನಿಲಯದಲ್ಲಿ ಶುಕ್ರವಾರ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಸ್ವಚ್ಛತಾ ಕಾರ್ಯದೊಂದಿಗೆ ಮಹಾತ್ಮ ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರಿಗೆ ಪ್ರಮುಖ ಸ್ಥಾನ ನೀಡಿ, ಅವರ ಸಾಮಾಜಿಕ ಮತ್ತು ರಾಜಕೀಯ ಸಬಲೀಕರಣಕ್ಕೆ ಅತ್ಯಂತ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ನಿಲಯದ ಮೇಲ್ವೀಚಾರಕಿ ಜಯಂತಿ ಎನ್ ಹೇಳಿದರು.
ಪರ್ದಾ ಪದ್ಧತಿ ವಿನಾಶ, ಬಾಲ್ಯವಿವಾಹವನ್ನು ಕಟುವಾಗಿ ವಿರೋಧಿಸಿದ್ದು , ಹೆಣ್ಣುಮಕ್ಕಳಿಗೆ ಶಿಕ್ಷಣ ಮತ್ತು ಮಾನಸಿಕ ಪರಿಪಕ್ವತೆಯ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
ವಿಧವಾ ಪುನರ್ವಿವಾಹ, ಶಿಕ್ಷಣವಿಲ್ಲದೆ ಮಹಿಳೆಯರ ಮತ್ತು ಸಮಾಜದ ಅಭಿವೃದ್ಧಿ ಅಸಾಧ್ಯ ಎಂದು ನಂಬಿದ್ದ ಗಾಂಧೀಜಿ, ಹೆಣ್ಣುಮಕ್ಕಳ ಮೂಲಭೂತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಗಾಂಧೀಜಿಯವರ ಈ ಕ್ರಾಂತಿಕಾರಿ ಚಿಂತನೆಗಳು ಭಾರತೀಯ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವನ್ನು ಎತ್ತಿಹಿಡಿಯಲು ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳು ಸಿಗಲು ಬಲವಾದ ಅಡಿಪಾಯ ಹಾಕಿದೆ ಎಂದು ಜಯಂತಿ ಎನ್ ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಾಯಕಿಯರಾದ ಪವಿತ್ರಾ, ಶ್ರತಿ, ರೇಣುಕಾ, ಅನುಜ್ಙ ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.




