Sunday, October 18, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ: 26ನೇ ನವ ರಂಗೋತ್ಸವ

ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ: 26ನೇ ನವ ರಂಗೋತ್ಸವ

ರಂಗ ನಿರ್ದೇಶಕ ಪ್ರಶಾಂತ್ ಉದ್ಯಾವರ ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿ.

ಮುದ್ರಾಡಿ : ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ ಮುದ್ರಾಡಿ ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ ನಡೆಯುವ 26ನೇ ನವ ರಂಗೋತ್ಸವದಲ್ಲಿ ನೀಡುವ ಬಿ.ವಿ.ಕಾರಂತ ಯುವ ಪ್ರಶಸ್ತಿಗೆ ರಂಗ ನಿರ್ದೇಶಕರಾದ ಉಡುಪಿಯ ಎಂಜಿಎಂ ಕಾಲೇಜಿನ ಕನ್ನಡ ಉಪನ್ಯಾಸ ಪ್ರಶಾಂತ್ ಉದ್ಯಾವರ ಆಯ್ಕೆಯಾಗಿದ್ದಾರೆ.

ಕಳೆದ 18 ವರ್ಷಗಳಿಂದ ನೃತ್ಯ, ಲಲಿತಕಲೆ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ‘ಯಾನ ಡ್ಯಾನ್ಸ್ ಥಿಯೇಟರ್’ ಎಂಬ ಸಮಕಾಲೀನ ನೃತ್ಯ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಹಲವು ರಾಜ್ಯಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ರಂಗಭೂಮಿ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ‘ಸಂಗಮ ಕಲಾವಿದರು, ಮಣಿಪಾಲ’ ಸಂಸ್ಥೆಯೊಂದಿಗೆ ನಟರಾಗಿ ಮತ್ತು ನಿರ್ದೇಶಕರಾಗಿ ತೊಡಗಿಸಿಕೊಂಡಿದ್ದಾರೆ. ಹಲವಾರು ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದಾರೆ. ವಿ ಟೀಚ್ ಲೈಫ್.. ಸರ್!!, ರಕ್ಕಸ ತಂಗಡಿ, ಊರುಭಂಗ, ಪಂಚವಟಿ, ಉಡಿಯೊಳಗಣ ಕಿಚ್ಚು, ದ್ವಯ ಮುಂತಾದ ನಾಟಕಗಳನ್ನು ನಿರ್ದೇಶಿಸುವ ಮೂಲಕ ರಾಜ್ಯದ ಯುವ ನಿರ್ದೇಶಕರಲ್ಲಿ ಒಬ್ಬರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಶಾಂತ್ ಉದ್ಯಾವರ ನಿರ್ದೇಶಿಸಿದ ನಾಟಕಗಳು ಬೆಂಗಳೂರಿನ ರಂಗಶಂಕರ, ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (NSD), ಮೈಸೂರಿನ ರಂಗಾಯಣ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಂಗೋತ್ಸವಗಳಲ್ಲಿ ಪ್ರದರ್ಶನಗೊಂಡಿವೆ.

ಅಮಿಟಿ ವಿಶ್ವವಿದ್ಯಾಲಯ, ನೋಯ್ಡಾದಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ ರಾಷ್ಟ್ರಮಟ್ಟದ ಏಕಾಂಕ ನಾಟಕ ಸ್ಪರ್ಧೆಯಲ್ಲಿ ಇವರ ನಿರ್ದೇಶನದ ‘ಪಂಚವಟಿ’ ನಾಟಕ ಪ್ರಥಮ ಸ್ಥಾನ ಪಡೆದಿದೆ.

ಅದೇ ರೀತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ, ನವದೆಹಲಿ ಆಯೋಜಿಸಿದ್ದ ‘ವಂದೇ ಮಾತರಂ’ ನ 150ನೇ ವರ್ಷಾಚರಣೆಯ ಅಂಗವಾಗಿ _’ಸ್ವಾತಂತ್ರ್ಯ ಶರಧಿ’ ನಾಟಕವನ್ನು ನಿರ್ದೇಶಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ದೃಶ್ಯಕಲೆ (Visual Art) ಯಲ್ಲಿಯೂ ಆಸಕ್ತಿ ಹೊಂದಿದ್ದು, ವಿಶೇಷವಾಗಿ ಮುಖವಾಡ ಮತ್ತು ವೇಷಭೂಷಣಗಳ ವಿನ್ಯಾಸ ಮಾಡುತ್ತಾರೆ.

ರಾಜ್ಯದ ಅನೇಕ ರಂಗತಂಡಗಳಿಗೆ ರಂಗ ತರಬೇತಿ ಕಾರ್ಯಾಗಾರಗಳನ್ನು ನಡೆಸಿ, ನಾಟಕಗಳನ್ನು ನಿರ್ದೇಶಿಸಿದ್ದಾರೆ.

ವಿ ಟೀಚ್ ಲೈಫ್.. ಸರ್!!, ಉಡಿಯೊಳಗಣ ಕಿಚ್ಚು ಮತ್ತು ದ್ವಯ ಇವರು ರಚಿಸಿದ ನಾಟಕಗಳಾಗಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!