Monday, November 9, 2026
Homeಪ್ರಮುಖ ಸುದ್ದಿಪಡಿತರ ಚೀಟಿ ಸಮಸ್ಯೆ : ಹೊಸ ಪಡಿತರ ಚೀಟಿ ನೀಡಿ.

ಪಡಿತರ ಚೀಟಿ ಸಮಸ್ಯೆ : ಹೊಸ ಪಡಿತರ ಚೀಟಿ ನೀಡಿ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್‌ ಅರ್ಹದ್‌ ಅವರಿಗೆ ಮಿಥುನ್‌ ಶೆಟ್ಟಿ ಚಾರ ಮನವಿ.

ಮನವಿ ಪರಿಶೀಲಿಸುವುದಾಗಿ ಸಚಿವರು ಭರವಸೆ.

 

ಹೆಬ್ರಿ :  ಸರ್ಕಾರ ಹೊಸ ಪಡಿತರ ಚೀಟಿ ನೀಡುವುದನ್ನು ನಿಲ್ಲಿಸಿ ಹಲವು ವರ್ಷಗಳೇ ಆಗಿವೆ. ಇದರಿಂದ ಜನತೆಗೆ ಹಲವಾರು ಸಮಸ್ಯೆಗಳು ಆಗುತ್ತಿದೆ. ಆದಾಯ ತೆರಿಗೆ ಮಿತಿಯ ಕಾರಣದಿಂದ ರದ್ದು ಆಗಿರುವ ಬಿಪಿಎಲ್‌ ಪಡಿತರ ಚೀಟಿಯನ್ನು ಪಲಾನುಭವಿಗಳಿಗೆ ಮರು ನೀಡುವಂತೆ ಕೃಷಿಕರು, ಪ್ರಗತಿಪರ ಹೋರಾಟಗಾರರಾದ ಹೆಬ್ರಿಯ ಚಾರ ಬಾವಿಗದ್ದೆ ಮಿಥುನ್‌ ಶೆಟ್ಟಿ ಅವರು ರಾಜ್ಯದ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ರಿಜ್ವಾನ್‌ ಅರ್ಷದ್‌ ಅವರಿಗೆ ಮನವಿ ಮಾಡಿದರು.

ಉಡುಪಿ ಜಿಲ್ಲೆಯಾದ್ಯಂತ ಹೊಸ ಪಡಿತರ ಚೀಟಿಗಾಗಿ ಸಾವಿರಾರು ಕುಟುಂಬಗಳು ಕಾಯುತ್ತಿವೆ. ಪಡಿತರ ಚೀಟಿಯಿಲ್ಲದೆ ಎಲ್ಲದ್ದಕ್ಕೂ ಸಮಸ್ಯೆಯಾಗುತ್ತಿದೆ. ಕಡು ಬಡವರು. ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ಸಂಕಷ್ಟಗಳಿಗೆ ಬ್ಯಾಂಕ್‌ ಹಣಕಾಸು ಸಂಸ್ಥೆಗಳಿಗೆ ಸಾಲಕ್ಕಾಗಿ ಹೋದಾಗ ಐಟಿ ರಿಟರ್ನ್ ಪೈಲ್‌ ಪಡೆದುಕೊಂಡು ಸಾಲ ನೀಡುತ್ತಾರೆ.

ಆ ಬಳಿಕ ಐಟಿ ರಿಟರ್ನ್ಸ್‌ ಮಾಡಿ ಸಾಲ ಪಡೆದವರ ಬಿಪಿಎಲ್‌ ಕಾರ್ಡುಗಳು ರದ್ದು ಆಗಿದೆ. ಮತ್ತೇ ಎಷ್ಟು ಬಾರಿ ಅರ್ಜಿ ನೀಡಿದರು. ಬಿಪಿಎಲ್‌ ಪಡಿತರ ಚೀಟಿ ನೀಡಲಾಗುತ್ತಿಲ್ಲ. ಅರ್ಹರಿಗೆ ಬಿಪಿಎಲ್‌ ಕಾರ್ಡ್‌ ದೊರೆಯದೆ ಸರ್ಕಾರದ ಯಾವೂದೇ ಸೌಲಭ್ಯ, ಯೋಜನೆಗಳು, ಆರೋಗ್ಯ ಯೋಜನೆಗಳು ಕೂಡ ದೊರೆಯುತ್ತಿಲ್ಲ. ಬಡವರಿಗೆ ಇದರಿಂದ ಅತ್ಯಂತ ಸಮಸ್ಯೆಯಾಗುತ್ತಿದೆ ಎಂದು ಸಚಿವರಿಗೆ ಮಿಥುನ್‌ ಶೆಟ್ಟಿ ಮನವರಿಕೆ ಮಾಡಿದರು.

ಹೊಸ ಪಡಿತರ ಚೀಟಿ ಇಲ್ಲದೆ ಹಾಗೂ ಐಟಿ ರಿಟರ್ನ್ಸ್‌ ಕಾರಣದಿಂದ ರದ್ದು ಆಗಿರುವ ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದ ಕುಟುಂಬಗಳು ಸಂಕಷ್ಟ ಎದುರಿಸುತ್ತಿದ್ದಾರೆ.

ವಿಶೇಷವಾಗಿ ಪರಿಗಣಿಸಿ ಜನತೆಗೆ ಹೊಸ ಪಡಿತರ ಚೀಟಿಯನ್ನು ನೀಡುವುದು ಮತ್ತು ಐಟಿ ರಿಟರ್ನ್ಸ್‌ ಸಮಸ್ಯೆಯ ಕಾರಣದಿಂದ ರದ್ದುಗೊಂಡಿರುವ ಬಿಪಿಎಲ್‌ ಕಾರ್ಡುಗಳನ್ನು ಮರಳಿ ದೊರೆಯುವಂತೆ ಮಾಡಬೇಕು, ಐಟಿ ರಿಟರ್ನ್ಸ್‌ ಕಾರಣದಿಂದ ಬಡವರು ಮತ್ತು ಮಧ್ಯಮ ವರ್ಗದವರ ಬಿಪಿಎಲ್‌ ಕಾರ್ಡುಗಳು ರದ್ದು ಆಗುವುದನ್ನು ನಿಲ್ಲಿಸುವಂತೆ ಮಿಥುನ್‌ ಶೆಟ್ಟಿ ವಿಶೇಷವಾಗಿ ಮನವಿ ಮಾಡಿದರು. ಆಧ್ಯತೆಯ ನೆಲೆಯಲ್ಲಿ ಮನವಿ ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!