ಅರ್ಹರಿಗೆ ಗ್ರಹಲಕ್ಷ್ಮೀ ಸೇರಿ ಗ್ಯಾರಂಟಿ ಯೋಜನೆ ತಲುಪಿಸಿ.
ಶೀಘ್ರದಲ್ಲಿ 7 ಗ್ರಾಮಗಳ ಗ್ಯಾರಂಟಿ ಅದಾಲತ್ : ಶಂಕರ ಶೇರಿಗಾರ್.
ಹೆಬ್ರಿ : ಬ್ಯಾಂಕ್ ಸಮಸ್ಯೆಯನ್ನು ಸರಿಪಡಿಸಿ ಅರ್ಹರಿಗೆ ಗ್ಯಾರಂಟಿ ಯೋಜನೆ ಮತ್ತು ಗೃಹಲಕ್ಷ್ಮೀ ಯೋಜನೆಯು ಕೈತಪ್ಪದಂತೆ ನೋಡಿಕೊಳ್ಳಿ, ಸರ್ಕಾರ ಯೋಜನೆಯು ಎಲ್ಲಾ ಅರ್ಹರಿಗೂ ತಲುಪಬೇಕು ಎಂದು ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಶೇರಿಗಾರ್ ಹೇಳಿದರು.
ಅವರು ಇತ್ತೀಚೆಗೆ ಹೆಬ್ರಿ ಗ್ರಾಮ ಪಂಚಾಯಿತಿಯ ರಾಜೀವ ಗಾಂಧಿ ಸಭಾಭವನದಲ್ಲಿ ನಡೆದ ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೃಹಜ್ಯೋತಿ ಪರಿಷ್ಕರಣೆಯಲ್ಲಿ ಬಿಟ್ಟು ಹೋಗಿರುವ ಫಲಾನುಭವಿಗಳನ್ನು ಮತ್ತೇ ಪರಿಷ್ಕರಣೆಗೆ ಒಳಪಡಿಸಿ, ಬಿಟ್ಟು ಹೋಗಿರುವ ಫಲಾನೂಭವಿಗಳನ್ನು ಕೂಡ ಸೇರಿ ಎಂದು ಮೆಸ್ಕಾಂ ಅಧಿಕಾರಗಳಿಗೆ ಶಂಕರ ಶೇರಿಗಾರ್ ಸೂಚಿಸಿದರು. ಶಾಲೆಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆಯ ಇರುವ ಹಾಗೆ ಅಂಗನವಾಡಿಗೂ ನೀಡಿ, ಮನೆಕಟ್ಟಿಕೊಂಡು ಕುಳಿತ ಹಲವಾರು ಕುಟುಂಬಗಳು ವಿದ್ಯುತ್ ಸಂಪರ್ಕವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಕಂದಾಯ ದಾಖಲೆಗಳು ಇಲ್ಲ, ಅವರಿಗೂ ವಿದ್ಯುತ್ ಸಂಪರ್ಕ ನೀಡಲು ಕ್ರಮ ಕೈಗೊಳ್ಳಿ ಎಂದು ಶಂಕರ ಶೇರಿಗಾರ್ ಹೇಳಿದರು. ಹೆಬ್ರಿ ತಾಲ್ಲೂಕಿನಲ್ಲಿ 218 ಮಂದಿಗೆ 56ಲಕ್ಷ ರೂಪಾಯಿ ಯುವನಿಧಿಯನ್ನು ಪಾವತಿಸಲಾಗಿದೆ. ಬಾಕಿ ಉಳಿದಿರುವ ಹೆಬ್ರಿ ತಾಲ್ಲೂಕಿನ 7 ಗ್ರಾಮಗಳ ಗ್ಯಾರಂಟಿ ಅದಾಲತ್ ಗಳನ್ನು ಅತೀ ಶೀಘ್ರವಾಗಿ ಮಾಡಲಾಗುವುದು ಸಮಿತಿಯ ಸದಸ್ಯರು ಸಹಕರಿಸುವಂತೆ ಅಧ್ಯಕ್ಷ ಶಂಕರ ಶೇರಿಗಾರ್ ಹೇಳಿದರು.

ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪ್ರಸಾದ್ ರಾವ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ ಡಿ,ಈ., ಹೆಬ್ರಿ ಮೆಸ್ಕಾಂ ಎಇಇ ನಾಗರಾಜ್, ಪ್ರಭಾರ ಆಹಾರ ನಿರೀಕ್ಷಕ ಮಹೇಶ ಕುಮಾರ್, ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವೀಚಾರಕಿ ಗುಣವತಿ, ಸಮಿತಿಯ ಸದಸ್ಯರಾದ ಶಶಿಕಲಾ ಆರ್ ಪಿ, ಸಾವಿತ್ರಿ ನಾಯ್ಕ್, ಸತೀಶ್ ಹುತ್ತುರ್ಕೆ, ರಾಜು ಪೂಜಾರಿ, ಶರತ್ ಕುಮಾರ್ ಶೆಟ್ಟಿ, ಜಗದೀಶ ಹೇರಳೆ, ರಾಜೇಶ ಆಚಾರ್ಯ, ತಾಲ್ಲೂಕು ಪಂಚಾಯಿತಿಯ ಲತಾ ಶೆಟ್ಟಿ, ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಕಚೇರಿಯ ಶಾಂತಿ ಉಪಸ್ಥಿತರಿದ್ದರು. ದಿನೇಶ ಡಿ,ಈ ಸ್ವಾಗತಿಸಿ ವಂದಿಸಿದರು.



