ಕಾರ್ಕಳ ಹೆಬ್ರಿ ಎನ್ಎಸ್ಎಸ್ ವಲಯ ಮಟ್ಟದ ಪ್ರಹಸನ ಸ್ಪರ್ಧೆ.
ಹೆಬ್ರಿ : ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐಕ್ಯುಎಸಿ ಹಾಗೂ ಎನ್ಎಸ್ಎಸ್ ನ ಸಹಯೋಗದೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾರ್ಕಳ ಹೆಬ್ರಿ ಎನ್ಎಸ್ಎಸ್ ವಲಯ ಮಟ್ಟದ ಪ್ರಹಸನ ಸ್ಪರ್ಧೆ ಇತ್ತೀಚೆಗೆ ಕಾಲೇಜಿನಲ್ಲಿ ಜರುಗಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ವಿದ್ಯಾಧರ ಹೆಗ್ಡೆ ಎಸ್ ಅವರು ವಿವಿಧ ಕಾಲೇಜುಗಳಿಂದ ಆಗಮಿಸಿದ ಸ್ಪರ್ಧಿಗಳನ್ನು ಅಭಿನಂದಿಸಿ ಪ್ರಹಸನವು ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಯನ್ನು ವ್ಯಕ್ತಪಡಿಸಲು ಉತ್ತಮ ಮಾಧ್ಯಮ ಎಂದು ಹೇಳಿದರು. ತೀರ್ಪುಗಾರರಾಗಿ ಬಾಲಚಂದ್ರ ಮುದ್ರಾಡಿ ಮತ್ತು ಶಕುಂತಲಾ ಸ್ಪರ್ಧಿಗಳನ್ನು ಪ್ರಶಂಶಿಸಿ, ಪ್ರದರ್ಶನವನ್ನು ಉತ್ತಮ ಪಡಿಸಲು ಸಲಹೆ ನೀಡಿದರು. ಕಾಲೇಜಿನ ಐಕ್ಯುಎಸಿ ಸಂಚಾಲಕ ಡಾ. ಗಣೇಶ್ ಎಸ್., ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಸುಷ್ಮಾ ರಾವ್, ಕಾಲೇಜಿನ ಸಿಬ್ಬಂದಿಗಳು ಹಾಗೂ ವಿವಿಧ ಕಾಲೇಜಿನಿಂದ ಆಗಮಿಸಿದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎನ್ಎಸ್ಎಸ್ ಅಧಿಕಾರಿ ಪ್ರವೀಣ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
ಪ್ರಥಮ ಸ್ಥಾನ – ಎಂಪಿಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ.
ದ್ವಿತೀಯ ಸ್ಥಾನ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ
ತೃತೀಯ ಸ್ಥಾನ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕ ಕಾಲೇಜು ಪಡೆಯಿತು.



