Saturday, November 7, 2026
Homeಕಾರ್ಕಳಗೂಡುದೀಪದಲ್ಲಿ ಮತಗಳ್ಳತನ ಬಗ್ಗೆ ಜಾಗೃತಿ ಸಂದೇಶ

ಗೂಡುದೀಪದಲ್ಲಿ ಮತಗಳ್ಳತನ ಬಗ್ಗೆ ಜಾಗೃತಿ ಸಂದೇಶ

ಜನರಲ್ಲಿ ಜಾಗೃತಿಗಾಗಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರ ವಿನೂತನ ಪ್ರಯೋಗ.
ಕಾರ್ಕಳ : ಕಾಂಗ್ರೆಸ್ ಪಕ್ಷ ದೇಶ ವ್ಯಾಪ್ತಿಯಲ್ಲಿ ಮತಗಳ್ಳತನದ ವಿರುದ್ದ ಸುದೀರ್ಘವಾಗಿ ಪ್ರಬಲ ಹೋರಾಟವನ್ನು ನಡೆಸುತ್ತಿದ್ದು ಇದಕ್ಕೆ ಬೆಂಬಲವಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ದೀಪಾವಳಿ ಗೂಡುದೀಪದಲ್ಲಿ  ಮತದಾರರಿಗೆ ಮತಗಳ್ಳತನದ ಬಗ್ಗೆ  ಜಾಗೃತಿ ಮೂಡಿಸುವ ಸಂದೇಶವನ್ನು ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
 ವೋಟ್ ಬಚಾವೋ ದೇಶ್- ಬಚಾವೋ, ವೋಟ್ ಚೋರ್- ಗದ್ದಿ ಚೋಡ್, ಮತ ಮಾರಾಟಕ್ಕಿಲ್ಲ- ಮತ ಕಳ್ಳತನಕ್ಕಿಲ್ಲ, ನಮ್ಮ ಮತ- ನಮ್ಮ ಹಕ್ಕು, ಪ್ರಜಾಪ್ರಭುತ್ವ ರಕ್ಷಣೆ- ನಮ್ಮೆಲ್ಲರ ಹೊಣೆ ಮೊದಲಾದ ಸಂದೇಶವನ್ನು ಗೂಡುದೀಪದಲ್ಲಿ ಬರೆಯಲಾಗಿದೆ.
ಈ ಹಿಂದೆಯೂ ಕೋವಿಡ್ 19 ಸಂದರ್ಭದಲ್ಲಿ ಸಾರ್ವಜನಿಕರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಹಲವು ಸಂದೇಶವನ್ನು ಗೂಡುದೀಪದ ಮೂಲಕ ನೀಡಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!