Sunday, August 9, 2026
HomeUncategorizedಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆಯಲ್ಲಿ "ಮಾನವ ಕಳ್ಳ ಸಾಗಣೆ ಜಾಗೃತಿ ಶಿಬಿರ "

ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆಯಲ್ಲಿ “ಮಾನವ ಕಳ್ಳ ಸಾಗಣೆ ಜಾಗೃತಿ ಶಿಬಿರ “

ಬಿದ್ಕಲ್‌ ಕಟ್ಟೆ : ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ ಪ್ರೌಢಶಾಲೆಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಮತ್ತು ಶಿವ ಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ ಆಶ್ರಯ ದಲ್ಲಿ “ಮಾನವ ಕಳ್ಳ ಸಾಗಣೆ ಜಾಗೃತಿ ಶಿಬಿರ ಕಾರ್ಯಕ್ರಮ ಜರುಗಿತು. ಕಾಲೇಜಿನ ಉಪ ಪ್ರಾಂಶುಪಾಲರಾದ ಶಿವಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ ಅಧ್ಯಕ್ಷ ಎಂ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಉಪಾಧ್ಯಕ್ಷ ಗೌತಮ್ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ 400 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ವಕೀಲರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿಯ ಕಾನೂನು ನೆರವು ಅಭಿರಕ್ಷಕ ರಾಘವೇಂದ್ರ ಎಸ್ ವಿದ್ಯಾರ್ಥಿಗಳಿಗೆ ಮಾನವ ಕಳ್ಳ ಸಾಗಾಣಿಕೆಯ ಬಗ್ಗೆ ಮಾಹಿತಿ, ವಿದ್ಯಾರ್ಥಿಗಳಿಗೆ ಆಮಿಶ ತೋರಿಸಿ ಕದ್ದು ಒಯ್ದು ವೇಶ್ಯವಾಟಿಕೆ, ಬಾಲಕಾರ್ಮಿಕ ಪದ್ಧತಿಗೆ ದೂಡುವ ಸಂಭವವಿದ್ದು ಜಾಗ್ರತಿ ವಹಿಸುವಂತೆ ಸಲಹೆ ನೀಡಿದರು. ವಿದ್ಯಾರ್ಥಿಗಳ ಹಕ್ಕುಗಳು ಮತ್ತು ನೆರವಿಗಾಗಿ ಇರುವ ಕಾನೂನು, ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸುವ ವ್ಯಕ್ತಿಯ ಬಗ್ಗೆ ಜಾಗ್ರತೆ ಅರಿವು, ಪೋಕ್ಸೋ ಕಾಯ್ದೆ ಮತ್ತು ದೌರ್ಜನ್ಯಕ್ಕೆ ಒಳಗಾದ ಮಗುವಿನ ರಕ್ಷಣೆ ಮತ್ತು ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಶಿಕ್ಷಿಸಲು ಇರುವ ಕಾನೂನಿನ ಮಾಹಿತಿ ನೀಡಿದರು.

ಶಿವಶಾಂತಿ ಮೊಳಹಳ್ಳಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮೋಹನದಾಸ್ ಶೆಟ್ಟಿ, ರಮೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ದಿನಪಾಲ ಶೆಟ್ಟಿ, ಉಡುಪಿ ಕಾನೂನು ಸೇವಾ ಪ್ರಾಧಿಕಾರದ ಪ್ಯಾರ ಲೀಗಲ್ ಸ್ವಯಂ ಸೇವಕ ರಕ್ಷಿತ್ ಕುಮಾರ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಪೂಜಾರಿ ಸ್ವಾಗತಿಸಿದರು ನಾಗರಾಜ್ ನಿರೂಪಿಸಿ, ಶಾಲಾ ಶಿಕ್ಷಕಿ ಹೆಲನ್ ಶಾಲೆಟ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments