ಹೆಬ್ರಿ : ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಐಕ್ಯೂಎಸಿ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜನೆಯಲ್ಲಿ ಟೀಮ್ ಸಿನರ್ಜಿ ಎನ್ನುವ ಕಾರ್ಯಗಾರ ನಡೆಯಿತು.
ಕಾರ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಮನೋಜ್ ಲೂಯಿಸ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಶೈಕ್ಷಣಿಕ ಸಾಲಿನ ಕಾಮರ್ಸ್ ಅಸೋಸಿಯೇಷನ್ ವಿಭಾಗದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ ವೈಯುಕ್ತಿಕ ಹಾಗೂ ಔದ್ಯೋಗಿಕ ಬದುಕಿನಲ್ಲಿ ತಂಡ ರಚನೆ ಹಾಗೂ ಅದನ್ನು ನಿಭಾಯಿಸುವ ಸಾಮರ್ಥ್ಯದ ಅಗತ್ಯತೆ ಕುರಿತು ಮಾತನಾಡಿದರು.
ಪೂರಕವಾಗಿ ಹಲವು ಕ್ರಿಯಾಶೀಲ ಚಟುವಟಿಕೆಗಳನ್ನು ನಡೆಸಿ ವಿದ್ಯಾರ್ಥಿಗಳ ತಂಡ ನಿರ್ವಹಣಾ ಸಾಮರ್ಥ್ಯದ ಚಟುವಟಿಕೆಗಳನ್ನು ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ. ವಿದ್ಯಾಧರ್ ಹೆಗ್ಡೆ ಎಸ್ ಮಾತನಾಡಿ ಕಾಲೇಜಿನಲ್ಲಿ ಒದಗಿಸುವ ಇಂತಹ ವಿಪುಲ ತರಬೇತಿ ಅವಕಾಶಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಸಂಯೋಜಕರಾದ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಷ್ಮಾ ರಾವ್ ಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಐಕ್ಯು ಎಸಿ ಸಂಚಾಲಕ ಡಾ. ಗಣೇಶ್ ಎಸ್, ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮೇವಿ ಮಿರಾಂಡ, ವಿದ್ಯಾರ್ಥಿ ಕಾರ್ಯದರ್ಶಿ ಜಿತೇಶ್ ಉಪಸ್ಥಿತರಿದ್ದರು
ವಿದ್ಯಾರ್ಥಿ ಆತ್ಮಿಕ್ ನಿರೂಪಿಸಿದರು. ಪ್ರಸನ್ನ ವಂದಿಸಿದರು. ವಿನಯ ಅತಿಥಿಗಳ ಪರಿಚಯಿಸಿದರು.
ಸಂಜನಾ ಪ್ರಾರ್ಥಿಸಿದರು.



