Sunday, August 9, 2026
Homeಬೆಳ್ವೆ ಗ್ರಾಮ ಪಂಚಾಯತ್‌ಕೆಳಸುಂಕ ವಿದ್ಯಾರ್ಥಿಗಳಿಗೆ ಸಾಮೂಹಿಕ ಟ್ರ್ಯಾಕ್ ಸೂಟ್ ವಿತರಣೆ.

ಕೆಳಸುಂಕ ವಿದ್ಯಾರ್ಥಿಗಳಿಗೆ ಸಾಮೂಹಿಕ ಟ್ರ್ಯಾಕ್ ಸೂಟ್ ವಿತರಣೆ.

4 ಶಾಲೆ – 5 ಅಂಗನವಾಡಿ ಮಕ್ಕಳಿಗೆ ವಿತರಣೆ.

ಬೆಳ್ವೆ : ಗೀತಾ ಹೆಚ್ ಎಸ್ ಎನ್ ಫೌಂಡೇಶನ್, ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ ಹಾಗೂ ಟೀಮ್ ಮಲೆನಾಡು ಹ್ಯೂಮೆನಿಟರಿಯನ್ ಟ್ರಸ್ಟ್ ಬೆಳ್ವೆ ಇದರ ಆಶ್ರಯದಲ್ಲಿ ಅಮಾಸೆಬೈಲು ೪ ಕಿರಿಯ ಪ್ರಾಥಮಿಕ ಶಾಲೆ ಹಾಗೂ ೫ ಅಂಗನವಾಡಿ ಕೇಂದ್ರಗಳ ವಿದ್ಯಾರ್ಥಿಗಳಿಗೆ ಸಮೂಹಿಕ ಟ್ರ್ಯಾಕ್ ಸೂಟ್ ವಿತರಣಾ ಕಾರ್ಯಕ್ರಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆಳಸುಂಕ ಅಮಾಸೆಬೈಲಿನಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಭಾಸ್ಕರ್ ನಾಯ್ಕ್ ವಹಿಸಿದ್ದರು. ಹಾಲಾಡಿ ವಲಯ ಶಿಕ್ಷಣ ಸಂಯೋಜಕ ಶೇಖರ್ ನಾಯಕ್ ಉದ್ಘಾಟಿಸಿದರು. ಗೀತಾ ಹೆಚ್ ಎಸ್ ಎನ್ ಫೌಂಡೇಶನ್ ಅಧ್ಯಕ್ಷ ಶಂಕರ್ ಐತಾಳ್, ಟೀಮ್ ಮಲೆನಾಡು ಹ್ಯೂಮನಿಟರಿಯನ್ ಟ್ರಸ್ಟ್ ಬೆಳ್ವೆ ಅಧ್ಯಕ್ಷ ಮುಸ್ತಾಕ್ ಅಹಮದ್, ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ ಅಧ್ಯಕ್ಷೆ ಚಂದ್ರಿಕಾ, ನಿವೃತ ಮುಖ್ಯಶಿಕ್ಷಕ ಪಟ್ಟಾಬಿ ರಾಮ್ ಭಟ್, ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಶೇಖರ್ ನಾಯ್ಕ, ಲಯನ್ಸ್ ಕ್ಲಬ್ ಬೆಳ್ವೆ ಸದಸ್ಯೆ ಭಾರ್ಗವಿ, ಚತುರ್ಮುಖ ಬ್ರಹ್ಮ ಶಾರದೆ ದೇವಸ್ಥಾನ ಆಡಳಿತ ಮುಕ್ತೇಸರ ಕರುಣಾಕರ ಶೆಟ್ಟಿಗಾರ್, ಸ್ಥಳೀಯರಾದ ರಾಮಣ್ಣ ಹೆಗ್ಡೆ, ಲಯನ್ಸ್ ಕ್ಲಬ್ ಉಪಾಧ್ಯಕ್ಷರಾದ ಪತ್ರಕರ್ತ ಸಂಜೀವ ಆರ್ಡಿ ಹಾಗೂ ಟೀಮ್ ಮಲೆನಾಡು ಹ್ಯೂ ಮೆನಿಟರಿಯನ್ ಟ್ರಸ್ಟ್ ಬೆಳ್ವೆ ಉಪಾಧ್ಯಕ್ಷ ಅಬ್ದುಲ್ ಶುಕುರ್ ಬೆಳ್ವೆ ಉಪಸ್ಥಿರಿದ್ದರು, ಶಿಕ್ಷಕಿ ದಿವ್ಯಾಲತ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments