ಉಡುಪಿ : ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿರುವ ಸರ್ಕಾರಿ ಸಾಮ್ಯದ ತೈಲ ಕಂಪೆನಿಗಳಿಂದ ಉಡುಪಿ ಜಿಲ್ಲೆಗೆ ಸರಬರಾಜು ಮಾಡುತ್ತಿರುವ ಗೃಹಬಳಕೆ ಎಲ್ ಪಿ ಜಿ ಅನಿಲ ಪಡೆಯುತ್ತಿರುವ ಇ ಕೆ ವೈ ಸಿ ಮಾಡಿಕೊಳ್ಳಲು ಬಾಕಿ ಇರುವ ಗ್ರಾಹಕರು ಇದೇ ಅಗಸ್ಟ್ 15 ನೇ ತಾರೀಖಿನೊಳಗೆ ಎಲ್ ಪಿ ಜಿ ಗೃಹಬಳಕೆ ಅನಿಲ ಪಡೆಯುತ್ತಿರುವ ಗ್ಯಾಸ್ ಏಜೆನ್ಸಿಯ ಕಚೇರಿಯಲ್ಲಿ ಕಡ್ಡಾಯವಾಗಿ ಇ ಕೆ ವೈ ಸಿ ಮಾಡಿಸಿಕೊಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೃಹಬಳಕೆ ಎಲ್ ಪಿ ಜಿ ಅನಿಲ ಬಳಕೆ _ ಇ ಕೆ ವೈ ಸಿ ಕಡ್ಡಾಯ.


