Sunday, October 18, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ. - 26ನೇ ವರ್ಷದ ನವರಂಗೋತ್ಸವ - ಸನ್ಮಾನ.

ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ. – 26ನೇ ವರ್ಷದ ನವರಂಗೋತ್ಸವ – ಸನ್ಮಾನ.

ರಂಗಪಯಣ ಮತ್ತು ಆದಿಮೂಲ ತಂಡದಿಂದ ರಂಗ ಗೀತೆಗಳ ಗಾಯನ ಸಂಭ್ರಮ.ನಾಟ್ಕದೂರು ಮುದ್ರಾಡಿಗೆ ಬರುವುದೇ ನಮಗೆಲ್ಲ ಸಂಭ್ರಮ : ರಾಜ್‌ ಗುರು ಹೊಸಕೋಟೆ.

ಮುದ್ರಾಡಿ : ನಾಟ್ಕದೂರು ಮುದ್ರಾಡಿಗೆ ಬರುವುದೇ ನಮಗೆಲ್ಲ ಇಂದು ಸಂಭ್ರಮ, ರಂಗಪಯಣದಲ್ಲಿ ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆಯು ಅದ್ಭುತ ಸಾಧನೆ ಮಾಡಿದೆ. ಖ್ಯಾತಿಯನ್ನು ಪಡೆದಿದೆ. ರಂಗಭೂಮಿಯಲ್ಲಿ ಇನ್ನಷ್ಟು ಸಾದನೆಯನ್ನು ಮಾಡುವಂತಾಗಲಿ ಎಂದು ರಂಗನಟ‌,ಗಾಯಕ ನಿರ್ದೇಶಕರಾದ ರಾಜ್‌ ಗುರು ಹೊಸಕೋಟೆ ಹೇಳಿದರು.

ಅವರು ಬುಧವಾರ ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ ಕಲಾ ಸಂಘಟನೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಮುದ್ರಾಡಿ ನಾಟ್ಕದೂರು ಬಿ.ವಿ.ಕಾರಂತ ಬಯಲು ರಂಗ ಮಂದಿರದಲ್ಲಿ ಅಕ್ಟೋಬರ್‌ 22 ರ ತನಕ ನಡೆಯುವ ೨೬ನೇ ವರ್ಷದ ನವರಂಗೋತ್ಸವ, ನಾಟ್ಕ ಮುದ್ರಾಡಿಯ 41ನೇ ವರ್ಷದ ಸಂಭ್ರಮದ 4ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಂಗನಟ ಜ್ಯೋತಿಷಿ ಸುರೇಂದ್ರ ಮೋಹನ್‌ ಮಾತನಾಡಿ ನಮ ತುಳುವೆರ್‌ ಕಲಾ ಸಂಘಟನೆ ಇನ್ನಷ್ಟು ಪ್ರಖ್ಯಾತಿ ಪಡೆಯಲಿ ಎಂದು ಆಶಿಸಿದರು. ಮುದ್ರಾಡಿ ನಮತುಳುವೆರ್‌ ಕಲಾ ಸಂಘಟನೆ ಮತ್ತು ಆದಿಶಕ್ತಿ ಕ್ಷೇತ್ರದಲ್ಲಿ 50 ವರ್ಷಗಳಿಂದ ಸೇವೆಯನ್ನು ಮಾಡುತ್ತಿರುವ ಶಾರದಾ ಮುದ್ರಾಡಿ ಮತ್ತು ರಘು ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.

ಮುದ್ರಾಡಿ ನಮತುಳುವೆರ್‌ ಕಲಾ ಸಂಘಟನೆ ನಾಟ್ಕ ಮುದ್ರಾಡಿ ಅಧ್ಯಕ್ಷ ರಂಗನಿರ್ದೇಶಕ ಸುಕುಮಾರ್‌ ಮೋಹನ್‌ ಅಧ್ಯಕ್ಷತೆ ವಹಿಸಿದ್ದರು. ಸೋಮಣ್ಣ ಮಡಿಕೇರಿ, ಪೂರ್ಣೇಶ ಬಜಗೋಳಿ, ರಚಿತಾ ಕುಲಾಲ್‌ ಕಬ್ಬಿನಾಲೆ, ಸುಗಂಧಿ ಉಮೇಶ ಕಲ್ಮಾಡಿ, ವಾಣಿ ಸುಕುಮಾರ್‌ ಮೋಹನ್‌ ಮುಂತಾದವರು ಉಪಸ್ಥಿತರಿದ್ದರು. ರಚಿತಾ ಕುಲಾಲ್‌ ಕಬ್ಬಿನಾಲೆ ನಿರೂಪಿಸಿ ಸ್ವಾಗತಿಸಿದರು.

ರಂಗಪಯಣ ಆದಿಮೂಲಕ ತಂಡದಿಂದ ರಂಗ ನಿರ್ದೇಶಕ ಗಾಯಕ ರಂಗನಟ ರಾಜ್‌ ಗುರು ಹೊಸಕೋಟೆ ನೇತ್ರತ್ವದಲ್ಲಿ ರಂಗಗೀತೆಗಳ ಗಾಯನ ಸಂಭ್ರಮ ನಡೆಯಿತು.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!