Sunday, November 8, 2026
Homeವರಂಗ ಗ್ರಾಮ ಪಂಚಾಯತ್‌ಕುಕ್ಕುದಕಟ್ಟೆ ಪರಂಪರೆ ಮುಂದುವರಿಸಲು ಮಾವಿನ ಗಿಡ ನೆಡುವ ಮೂಲಕ “ಕಟ್ಟೆ ಲೋಕಾರ್ಪಣೆ” - ಗೋಪೂಜೆ.

ಕುಕ್ಕುದಕಟ್ಟೆ ಪರಂಪರೆ ಮುಂದುವರಿಸಲು ಮಾವಿನ ಗಿಡ ನೆಡುವ ಮೂಲಕ “ಕಟ್ಟೆ ಲೋಕಾರ್ಪಣೆ” – ಗೋಪೂಜೆ.

ಜನನಿ ಫ್ರೆಂಡ್ಸ್  ಕುಕ್ಕುದಕಟ್ಟೆ ಸೇವಾ ಟ್ರಸ್ಟ್ ಸೇವೆ ಎಲ್ಲರಿಗೂ ಮಾದರಿ : ಸದಾಶಿವ ಉಪಾಧ್ಯಾಯ.

ಕುಕ್ಕುದಕಟ್ಟೆ ( ಮುನಿಯಾಲು ) : ಸಂಕಲ್ಪ ಶುದ್ಧಿ ಇದ್ದಾಗ ಕಾರ್ಯಗಳು ಒಳ್ಳೇಯದಾಗುತ್ತದೆ ಎಂಬುದಕ್ಕೆ ಜನನಿ  ಫ್ರೆಂಡ್ಸ್  ಕುಕ್ಕುದಕಟ್ಟೆ ಸೇವಾ ಟ್ರಸ್ಟ್ ನಿದರ್ಶನ. ಇದರ ಜನಪರ ಸೇವೆ ಎಲ್ಲರಿಗೂ ಮಾದರಿ. ಮಾವಿನಕಟ್ಟೆಯ ಹೆಸರನ್ನು ಮುಂದಿನ ಪೀಳಿಗೆಗೆ ಮಾವಿನ ಮರದ ಮೂಲಕ ಉಳಿಸಿ ಬೆಳೆಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಸಂಸ್ಥೆಯು ಸೇವೆಯ ಮೂಲಕ ಇನ್ನಷ್ಟು ಜನಮನ್ನಣೆ ಪಡೆಯಲಿ ಎಂದು ಪಡುಕುಡೂರು ಭದ್ರಕಾಳಿ ದೇವಸ್ಥಾನದ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಹೇಳಿದರು.

ಅವರು ಜನ ಸೇವೆಗಾಗಿಯೇ ಹುಟ್ಟಿಕೊಂಡ ಸಮಾನ ಮನಸ್ಕರ ಸಂಸ್ಥೆ ಜನನಿ ಫ್ರೆಂಡ್ಸ್  ಕುಕ್ಕುದಕಟ್ಟೆ ಸೇವಾ ಟ್ರಸ್ಟ್ ವತಿಯಿಂದ ಕುಕ್ಕುದಕಟ್ಟೆಯಲ್ಲಿ ಭಾನುವಾರ ಕುಕ್ಕುದ “ಕಟ್ಟೆ ಲೋಕಾರ್ಪಣೆ” ಮತ್ತು ಗೋಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

 

ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ಸೇವಾ ಟ್ರಸ್ಟ್ಅ ಧ್ಯಕ್ಷ ಚೇತನ್ ಕುಮಾರ್ ಅಧ್ಯಕ್ಷತೆ ವಹಿಸಿ ಎರಡೂವರೆ ವರ್ಷದ ಹಿಂದೆ ಆರಂಭಗೊಂಡ ನಮ್ಮ ಸಂಸ್ಥೆಯು ಎಲ್ಲರ ಸಹಕಾರದಲ್ಲಿ ಸಾರ್ಥಕ ಸೇವೆಯನ್ನು ಮಾಡುತ್ತ ಬಂದಿದೆ. ಸಂಸ್ಥೆಯನ್ನು ಬಲಪಡಿಲು ಎಲ್ಲರ ಸಹಕಾರ ನಮಗೆ ಬೇಕಿದೆ. ನಮ್ಮೂರು ಕುಕ್ಕುದಕಟ್ಟೆಯ ಹೆಸರು ಮತ್ತು ಪರಂಪರೆಯನ್ನು ಉಳಿಸಿ ಮುನ್ನಡೆಸುವ ಕಾರ್ಯವನ್ನು ಮಾಡಿದ್ದೇವೆ ಎಂದು ಕೃತಜ್ಞತೆ ಸಲ್ಲಿಸಿದರು.

ಪಡುಕುಡೂರು ಭದ್ರಕಾಳಿ ದೇವಸ್ಥಾನದ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಕುಕ್ಕುದಕಟ್ಟೆಯಲ್ಲಿ ಮಾವಿನ ಗಿಡವನ್ನು ನೆಟ್ಟು ಕಟ್ಟೆಯನ್ನು ಲೋಕಾರ್ಪಣೆ ಮಾಡಿ ಗೋಪೂಜೆ ನೆರವೇರಿಸಿದರು. ಜನನಿ ಫ್ರೆಂಡ್ಸ್  ಕುಕ್ಕುದಕಟ್ಟೆ ಸೇವಾ ಟ್ರಸ್ಟ್ ಮಹಿಳಾ ಸದಸ್ಯರು ಗೋವಿಗೆ ಆರತಿ ಬೆಳಗಿದರು. ಕಟ್ಟೆ ನಿರ್ಮಾಣಕ್ಕೆ ಸಹಕಾರ ನೀಡಿದ ಹಲವರನ್ನು ಗೌರವಿಸಲಾಯಿತು. ಕ್ಷೇತ್ರ ಪಾಲ್ಬೆಟ್ಟು ಮಹಾಮ್ಮಾಯಿ ಗದ್ದುಗೆಯ ಅರ್ಚಕ ಪ್ರವೀಣ್‌ ನಾಯ್ಕ್‌, ಉಡುಪಿ ಜಿಲ್ಲಾ ತುಳುವ ಮಹಾಸಭಾದ ಪ್ರಧಾನ ಸಂಚಾಲಕ ವಿಶ್ವನಾಥ ಆಚಾರ್ಯ ಪೆರ್ಡೂರು, ಮುಂಬೈ ಉದ್ಯಮಿ ಹರೀಶ ಪೂಜಾರಿ ತಿಮ್ಮೊಟ್ಟು, ಹಿರಿಯರಾದ ಸಂಜೀವ ಆಚಾರ್ಯ ಮಾವಿನಕಟ್ಟೆ, ಮಾತಿಬೆಟ್ಟು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್‌ ಮುಂತಾದವರು ಉಪಸ್ಥಿತರಿದ್ದರು.

ಜನನಿ ಫ್ರೆಂಡ್ಸ್  ಕುಕ್ಕುದಕಟ್ಟೆ ಸೇವಾ ಟ್ರಸ್ಟ್ ಗೌರವ ಸಲಹೆಗಾರರಾದ ಶಿಕ್ಷಕ ಮಾತಿಬೆಟ್ಟು ಪ್ರಕಾಶ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಕುಕ್ಕುದಕಟ್ಟೆಯ ಹಿನ್ನಲೆಯನ್ನು ವಿವರಿಸಿದರು. ಗೌರವ ಸಲಹೆಗಾರರಾದ ಸತೀಶ ಪೂಜಾರಿ ಎಳ್ಳಾರೆ, ನಾರಾಯಣ ಆಚಾರ್ಯ ಗರ್ಧರಬೆಟ್ಟು, ಶಂಕರ ಶೆಟ್ಟಿ ಮಾವಿನಕಟ್ಟೆ, ಕೋಶಾಧಿಕಾರಿ ಪ್ರದೀಪ್‌ ಸಾಲ್ಯಾನ್‌, ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಆಚಾರ್ಯ, ರತನ್‌ ಆಚಾರ್ಯ, ಶ್ರೀರಾಮ್‌ ಸೇರಿದಂತೆ ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ಸೇವಾ ಟ್ರಸ್ಟ್ ಸದಸ್ಯರು, ಮಾರ್ಗದರ್ಶಕರು, ಪದಾಧಿಕಾರಿಗಳು, ಸ್ಥಳೀಯ ಗಣ್ಯರು, ಭಾಗವಹಿಸಿದ್ದರು.

ಪೂರ್ವಿಕಾ ನಿರೂಪಿಸಿ ವಂದಿಸಿದರು. ರಕ್ಷಿತ್‌ ಆಚಾರ್ಯ ಪ್ರಾರ್ಥನೆ ಮಾಡಿದರು. ರಕ್ಷಿತಾ ಸುವರ್ಣ ಸ್ವಾಗತಿಸಿದರು.

….

ಜನ ಸೇವೆಗಾಗಿಯೇ ಹುಟ್ಟಿಕೊಂಡ ಸಮಾನ ಮನಸ್ಕರ ಸಂಸ್ಥೆ ಜನನಿ ಫ್ರೆಂಡ್ಸ್  ಕುಕ್ಕುದಕಟ್ಟೆ ಸೇವಾ ಟ್ರಸ್ಟ್ ತೆರೆಮರೆಯಲ್ಲಿ ಆರಂಭದಿಂದ ನಿರಂತರವಾಗಿ ಜನರ ಸೇವೆಯನ್ನು ಮಾಡುತ್ತ ಬಂದಿದೆ. ಊರಿನ ಅಭಿವೃದ್ಧಿಯಲ್ಲಿ ಕೈ ಜೋಡಿಸಿ ನಿರಂತರ ಸಹಕಾರ ನೀಡುವುದು. ಪರಿಸರ ಸ್ವಚ್ಚತೆ, ಊರಿನ ರಸ್ತೆಯ ಒಕ್ಕೆಲಗಳ ಸ್ವಚ್ಚತೆ, ಕಸ ವಿಲೇವಾರಿ, ಅನಾರೋಗ್ಯಕ್ಕೆ ತಕ್ಷಣದ ನೆರವು, ಬಡವರಿಗೆ ನೆರವು, ಆರೋಗ್ಯ ಶಿಬಿರಗಳು, ಕ್ರೀಡೆಗೆ ಪ್ರೋತ್ಸಾಹಕ ನೆರವು, ಸಂಕಷ್ಟ ಕಾಲಕ್ಕೆ ಸ್ಥಳೀಯರಿಗೆ ವಿಶೇಷ ನೆರವು, ಶ್ರಮದಾನದ ಮೂಲಕ ಜನಸೇವೆ ಹೀಗೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದು ಜನಮನದಲ್ಲಿ ಮನೆ ಮಾಡಿದೆ. ಮಾತೃಭೂಮಿ ಹಾಗೂ ಕರ್ಮಭೂಮಿ ಆಗಿರುವ ಕುಕ್ಕುದಕಟ್ಟೆಯನ್ನು ಕೇಂದ್ರವಾಗಿರಿಸಿಕೊಂಡು, ಸಮಾಜಸೇವೆಯ ಉದ್ದೇಶದಿಂದ ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ಸೇವಾ ಟ್ರಸ್ಟ್ (ರಿ) ಸ್ಥಾಪಿಸಲಾಗಿದೆ.

ಇದೀಗ ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ ಸೇವಾ ಟ್ರಸ್ಟ್ ಸದಸ್ಯರು ತಮ್ಮೂರಿನ ಪರಂಪರೆಯ ಉಳಿವಿಗಾಗಿ ” ಒಂದು ಹೆಜ್ಜೆ ಪರಂಪರೆಯ ಉಳಿವಿಗಾಗಿ” ಧ್ಯೇಯದೊಂದಿಗೆ ಮಹತ್ವದ ಹೆಜ್ಜೆ ಇಟ್ಟಿದೆ. ಸುಮಾರು ವರ್ಷಗಳ ಹಿಂದೆ ಕುಕ್ಕುದಕಟ್ಟೆಯ ಹಿರಿಯರು ಭಾವನಾತ್ಮಕ ಸಂಬಂಧದ ಪ್ರತೀಕವಾಗಿ, ಅಲ್ಲಿದ್ದ ಮಾವಿನ ಮರಗಳಿಗೆ ಕಟ್ಟೆ ನಿರ್ಮಿಸಿ ಗೌರವ ಸಲ್ಲಿಸಿದ್ದರು. ಅಂತಹ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಜನನಿ ಫ್ರೆಂಡ್ಸ್  ಕುಕ್ಕುದಕಟ್ಟೆ ಸೇವಾ ಟ್ರಸ್ಟ್ ಸಣ್ಣ ಪ್ರಯತ್ನವೇ ಕುಕ್ಕುದ “ಕಟ್ಟೆ ಲೋಕಾರ್ಪಣೆ” ಎಂಬ ಹೆಸರಿನಿಂದ ಪ್ರಸ್ತುತವಾಗಿಸಿದೆ.

ಕುಕ್ಕುದಕಟ್ಟೆಯ ಹಿರಿಯರು ನೀಡಿದ ಆ ನೆನಪು ಮತ್ತು ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಭಾನುವಾರ ಬೆಳಿಗ್ಗೆ ಗೋಪೂಜೆ ಹಾಗೂ ಮಾವಿನ ಗಿಡ ನೆಡುವ ಮೂಲಕ ಕಟ್ಟೆ ಲೋಕಾರ್ಪಣೆ ಕಾರ್ಯದ ಮೂಲಕ “ನಮ್ಮ ಕುಕ್ಕುದಕಟ್ಟೆ – ನಮ್ಮೆಲ್ಲರ ಹೆಮ್ಮೆ ” ಎಂಬುದನ್ನು ತೋರಿಸಿದೆ.

 

 

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!