Thursday, September 24, 2026
Homeಹೆಬ್ರಿಹೆಬ್ರಿ ಸಾರ್ವಜನಿಕ ಸ್ಥಳ : ಮಟ್ಕಾ ಜುಗಾರಿ : ಕೇಸು ದಾಖಲು

ಹೆಬ್ರಿ ಸಾರ್ವಜನಿಕ ಸ್ಥಳ : ಮಟ್ಕಾ ಜುಗಾರಿ : ಕೇಸು ದಾಖಲು

ಹೆಬ್ರಿ: ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಿರತನ ಮೇಲೆ ಕೇಸು ದಾಖಲಾದ ಘಟನೆ ಜು. 02ರಂದು ವರದಿಯಾಗಿದೆ.

ಹೆಬ್ರಿ ಗ್ರಾಮದ ವಿಜಯಲಕ್ಮೀ ಬಾರ್ ಎಂಡ್ ರೆಸ್ಟೊಂರೆಂಟ್‌ನ ಎದುರು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಮಾಹಿತಿ ಮೇರೆಗೆ ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಫೆಕ್ಟರ್ ಚಂದ್ರ ಎ.ಕೆ. ದಾಳಿ ನಡೆಸಿ ಮಟ್ಕಾ ಚೀಟಿ ಬರೆಯುತ್ತಿದ್ದ ಉಡುಪಿ ಪುತ್ತೂರು ಗ್ರಾಮದ ಚೇತನ (24)ನನ್ನು ವಶಕ್ಕೆ ಪಡೆಯಲಾಗಿದೆ.

ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ನಗದು, ಪುಸ್ತಕ ಹಾಗೂ ಬಾಲ್ ಪೆನ್‌ನ್ನು ಸ್ವಾಧೀನಪಡಿಸಲಾಗಿದೆ.

ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!