Monday, August 10, 2026
Homeಹೆಬ್ರಿಹೆಬ್ರಿಯಲ್ಲಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್‌ ಸಭೆ

ಹೆಬ್ರಿಯಲ್ಲಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್‌ ಸಭೆ

ಹೆಬ್ರಿ : ಹೆಬ್ರಿಯ ಹುತ್ತುರ್ಕೆಯಲ್ಲಿ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್‌ ಸಭೆಯು ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.

ಲೆಕ್ಕಪತ್ರವನ್ನು ಮಂಡಿಸಿದ ನೀರೆ ಕೃಷ್ಣ ಶೆಟ್ಟಿಯವರು ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ಜನ್ಮ ದಿನಚಾರಣೆಯನ್ನು ಆಚರಿಸುವ ಬಗ್ಗೆ ಸಮಾಲೋಚನೆ ನಡೆಸಿದರು. 

ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ದೀಪಾ ಭಂಡಾರಿ, ಕೋಶಾಧಿಕಾರಿ ಎಚ್.‌ ಜನಾರ್ಧನ್‌, ನಿರ್ದೇಶಕರಾದ ಮುನಿಯಾಲು ಗೋಪಿನಾಥ ಭಟ್‌, ಸುಕುಮಾರ್‌ ಮುನಿಯಾಲ್‌, ಮೂರ್ಸಾಲು ಮೋಹನದಾಸ ನಾಯಕ್‌, ಜಗದೀಶ ಹೆಗ್ಡೆ ಕಡ್ತಲ, ಜಗನ್ನಾಥ ಕುಲಾಲ್‌ ಶಿವಪುರ, ಚಾರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಿನೇಶ ಶೆಟ್ಟಿ, ಶ್ವೇತ ಕುಮಾರ್‌, ನಿಲೇಶ್‌ ಮುಂತಾದವರು ಉಪಸ್ಥಿತರಿದ್ದರು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments