Sunday, August 9, 2026
Homeಮಡಾಮಕ್ಕಿ ಗ್ರಾಮ ಪಂಚಾಯತ್‌ನೆರಳು ಚಾರಿಟೇಬಲ್ ಟ್ರಸ್ಟ್‌ ಅರಸಮ್ಮಕಾನು- ವೈದ್ಯ ಕೀರ್ತಿ ಯೋಗ ಸ್ಪೂರ್ತಿ ಕಾರ್ಯಕ್ರಮ : ವಿಶೆಷ ಸನ್ಮಾನ

ನೆರಳು ಚಾರಿಟೇಬಲ್ ಟ್ರಸ್ಟ್‌ ಅರಸಮ್ಮಕಾನು- ವೈದ್ಯ ಕೀರ್ತಿ ಯೋಗ ಸ್ಪೂರ್ತಿ ಕಾರ್ಯಕ್ರಮ : ವಿಶೆಷ ಸನ್ಮಾನ

ಮಡಾಮಕ್ಕಿ  : ನೆರಳು ಚಾರಿಟೇಬಲ್ ಟ್ರಸ್ಟ್‌ ಅರಸಮ್ಮಕಾನು ಶೇಡಿಮನೆ ಮತ್ತು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯಸ್ಥಾಪನಾ ಸಮಿತಿ ಅರಸಮ್ಮಕಾನು, ಶೇಡಿಮನೆ ವತಿಯಿಂದ ವೈದ್ಯ ಕೀರ್ತಿ ಯೋಗ ಸ್ಪೂರ್ತಿ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಬೆಳ್ವೆ ಕಾರ್ಯಕ್ರಮ ಉದ್ಘಾಟಿಸಿ ಉದ್ಘಾಟಿಸಿ ಮಾತನಾಡಿ ಯಾವುದೇ ಸಾಧನೆಯ ಹಿಂದೆ ಸಾಕಷ್ಟು ಶ್ರಮವಿರುತ್ತದೆ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವುದರ ಮೂಲಕ ಅವರು ಇನ್ನಷ್ಟು ಸಾಧನೆ ಮಾಡಲು ಸ್ಪೂರ್ತಿಯನ್ನು ನೀಡುವುದು ನಮ್ಮ ಕರ್ತವ್ಯ ಎಂದರು. 

 ಉಡುಪಿ ಜಿಲ್ಲಾ ನಿವೃತ್ತ  ದೈಹಿಕ ಶಿಕ್ಷಣ ಅಧಿಕಾರಿ ಸೀತಾನದಿ ವಿಠಲ ಶೆಟ್ಟಿ ಮಾತನಾಡಿ ಋಷಿ ಪರಂಪರೆಯಿಂದ ಬಂದ ಯೋಗ ನಮ್ಮ ಆರೋಗ್ಯ ವರ್ಧನೆಗೆ ಸಹಕಾರಿಯಾಗಿದೆ ವೈದ್ಯರು ನಮ್ಮ ಆರೋಗ್ಯವನ್ನು ಕಾಪಾಡಲು ಯೋಗ್ಯ ಚಿಕಿತ್ಸೆಯನ್ನು ನೀಡಿದರೆ, ಯೋಗ ನಮಗೆ ಕಾಯಿಲೆಯನ್ನು ಬರದಂತೆ ತಡೆಯುತ್ತದೆ. ಇಂತಹ ಯೋಗ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಿ ಏಷ್ಯನ್ ಗೇಮ್ಸ್ ಗೆ ಆಯ್ಕೆಯಾದ ರಿಷಾ ಆರ್ ಶೆಟ್ಟಿ ಅವರಿಗೆ  ಜಯ ಸಿಗಲಿ ಎಂದು ಶುಭ ಹಾರೈಸಿದರು.

ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಜಯರಾಮ್ ಶೆಟ್ಟಿ, ನಿವೃತ್ತ ಶಿಕ್ಷಕ ರಾಜೀವ ಶೆಟ್ಟಿ ಬೆಪ್ಡೆ, ಅರಸಮ್ಮಕಾನು ಶ್ರೀ ನಾಗಕನ್ನಿಕ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನದಾಸ ಹೆಗ್ಡೆ ಕುದ್ರುಬೀಡು, ಅರ್ಚಕ ನಾಗರಾಜ ಬಾಯರಿ, ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. 54 ವರ್ಷಗಳ ಕಾಲ ತನ್ನ ಹುಟ್ಟೂರು ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಕನಿಷ್ಠ ಶುಲ್ಕದೊಂದಿಗೆ ಗರಿಷ್ಠ ವೈಧ್ಯಕೀಯ ಸೇವೆ ನೀಡಿದ ಪರಮೇಶ್ವರ ಉಡುಪ ದಂಪತಿ ಮತ್ತು ವಿಶ್ವ ಯೋಗಾಸನ ಚಾಂಪಿಯನ್‌ ಶಿಫ್ ನಲ್ಲಿ ಅವಳಿ ಚಿನ್ನದ ಪದಕ ಗೆದ್ದು ಏಷ್ಯನ್ ಗೇಮ್ಸ್ ಗೆ ಆಯ್ಕೆಯಾದ ರಿಷಾ ಆರ್ ಶೆಟ್ಟಿ ಮತ್ತು ಅವರ ಪೋಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುಧಾಕರ್ ಶೆಟ್ಟಿ ಅರಸಮ್ಮಕಾನು ಮತ್ತು ಲೀಲಾವತಿ ಉಡುಪ ಅನಿಸಿಕೆ ವ್ಯಕ್ತಪಡಿಸಿದರು. 

ಶಿಕ್ಷಕ ರಾಜೀವ ಪೂಜಾರಿ ಶೇಡಿಮನೆ ಸ್ವಾಗತಿಸಿ, ನೆರಳು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ  ಕ್ರಮದಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು

ಎಸ್. ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿ ಶಿಕ್ಷಕ ಶಶಿಧರ ಶೆಟ್ಟಿ ನಿರೂಪಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments