ಮಡಾಮಕ್ಕಿ ಆಸರೆ ಯುವ ವೃಂದ ದಿಂದ “ಅಗೇಡಿ ಗೌಜ್ ಆಸಾಡಿ ಗಮ್ಮತ್” ಕೆಸರುಗದ್ದೆ ಕೂಟ.
ಮಡಾಮಕ್ಕಿ : ಯುವಕರನ್ನು ಒಗ್ಗೂಡಿಸಲು ಅಗೇಡಿ ಗೌಜ್ ಆಸಾಡಿ ಗಮ್ಮತ್” ಕೆಸರುಗದ್ದೆ ಕೂಟ ವೇದಿಕೆಯಾಗುತ್ತದೆ.
ಅಗೇಡಿ ಗೌಜ್ ಆಸಾಡಿ ಗಮ್ಮತ್” ಕೆಸರುಗದ್ದೆ ಕೂಟದ ಸಂಭ್ರಮ ಮೂಲಕ ಯುವ ಸಮುದಾಯ ಕೃಷಿಯತ್ತ ಮತ್ತೇ ಆಕರ್ಷಿತರಾಗಬೇಕು. ಆಟಕ್ಕೆ ಮಾತ್ರ ಸೀಮಿತವಾಗದೆ ಗಮ್ಮತ್ತಿನ ಪ್ರೇರಣೆಯಿಂದ ದೂರವಾದ ಕೃಷಿ ಬದುಕು ಮತ್ತೇ ಆರಂಭವಾಗಲಿ, ಕೃಷಿ ನಮ್ಮ ಬದುಕಿಗೆ ಅತ್ಯಂತ ಪ್ರಮುಖವಾಗಿದೆ, ಎಲ್ಲಾ ವಾಣಿಜ್ಯ ಉದ್ಯೋಗ ಉದ್ಯಮಗಳ ಜೊತೆಗೆ ಕೃಷಿ ಬೇಸಾಯ ಮಾಡಬೇಕು ಎಂದು
ಸಾಮಾಜಿಕ, ಧಾರ್ಮಿಕ ರಾಜಕೀಯ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಹೇಳಿದರು.
ಅವರು ಮಡಾಮಕ್ಕಿ ಆಸರೆ ಯುವ ವೃಂದ ದಿಂದ ಇತ್ತೀಚೆಗೆ ನಡೆದ “ಅಗೇಡಿ ಗೌಜ್ ಆಸಾಡಿ ಗಮ್ಮತ್” ಕೆಸರುಗದ್ದೆ ಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಉದ್ಯಮಿ ಶಶಿಧರ್ ಶೆಟ್ಟಿ ಮಡಾಮಕ್ಕಿ, ಕಾರ್ಕಳ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಅಮಾಸೆಬೈಲು ಸಬ್ ಇನ್ಸ್ ಪೆಕ್ಟರ್ ಸುಧಾರಾಣಿ ಟಿ, ನಿವೃತ್ತ ಶಿಕ್ಷಕ ಹಿರಿಯರಾದ ಅನಂತ ತಂತ್ರಿ ಮಡಾಮಕ್ಕಿ, ವಕೀಲ ಅರುಣ್ ಕುಮಾರ್ ಶೆಟ್ಟಿ ಹೆಬ್ರಿ, ದಯಾನಂದ ಪೂಜಾರಿ,ರಂಜನ್ ಹೆಗ್ಡೆ ಮಡಾಮಕ್ಕಿ, ಬಾಲಕೃಷ್ಣ ಶೆಟ್ಟಿ ಮಡಾಮಕ್ಕಿ, ಮಡಾಮಕ್ಕಿ ಆಸರೆ ಯುವ ವೃಂದದ ಅಧ್ಯಕ್ಷ ಮುರಳೀಧರ ಹೆಗ್ಡೆ, ಕಾರ್ಯದರ್ಶಿ ಅಕ್ಷಯ್ ಆಚಾರ್ಯ, ಸದಸ್ಯರು ಪದಾಧಿಕಾರಿಗಳು, ಉಪಸ್ಥಿತರಿದ್ದರು.
ರಾಜೇಶ್ ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದರು ನವೀನ್ ಶೆಟ್ಟಿ ನಿರೂಪಿಸಿ ವಂದಿಸಿದರು



