Sunday, August 9, 2026
Homeವರಂಗ ಗ್ರಾಮ ಪಂಚಾಯತ್‌ಪಡುಕುಡೂರು ಶ್ರೀ ಭದ್ರಕಾಳಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಂಕಲ್ಪ : ಸಮಾಲೋಚನಾ ಸಭೆ

ಪಡುಕುಡೂರು ಶ್ರೀ ಭದ್ರಕಾಳಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಂಕಲ್ಪ : ಸಮಾಲೋಚನಾ ಸಭೆ

ಪಡುಕುಡೂರು : ಕಾರಣೀಕ ಕ್ಷೇತ್ರ ಪಡುಕುಡೂರಿನ ತಾಯಿ ಶ್ರೀ ಭದ್ರಕಾಳಿ ದೇವಸ್ಥಾನದ ಜೀರ್ಣೋದ್ಧಾರದ ಜೊತೆಗೆ ಸುಸಜ್ಜಿತ ಸಭಾಭವನ ನಿರ್ಮಾಣ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಉದ್ದೇಶದಿಂದ ಸಮಾಲೋಚನಾ ಸಭೆಯು ಬುಧವಾರ ಊರಿನ ಹಿರಿಯರಾದ ಶ್ರೀ ಭದ್ರಕಾಳಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ದೊಡ್ಡಮನೆ ಪ್ರಶಾಂತ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಕ್ಷೇತ್ರದ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಧಾರ್ಮಿಕ ನೇತೃತ್ವ ವಹಿಸಿ ಹಲವಾರು ವಿಚಾರಗಳನ್ನು ಸಭೆಯಲ್ಲಿ ತಿಳಿಸಿದರು.

ಉದ್ಯಮಿ ದೊಡ್ಡಮನೆ ಮನೋಹರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ದೊಡ್ಡಮನೆ ರಮೇಶ ಶೆಟ್ಟಿ, ಜಗದೀಶ ಶೆಟ್ಟಿ ದೊಡ್ಡಮನೆ, ಬಾಲಕೃಷ್ಣ ಶೆಟ್ಟಿ ಚಿಕ್ಕಮಾರಬೆಟ್ಟು, ಪಡುಕುಡೂರು ಶಂಕರ ಶೆಟ್ಟಿ ಮುನಿಯಾಲು, ಸುಧಾಕರ ಶೆಟ್ಟಿ ಮುನಿಯಾಲು, ಪಡುಪರ್ಕಳ ಹರೀಶ ಶೆಟ್ಟಿ, ಅಶೋಕ್‌ ಶೆಟ್ಟಿ ಮಿತ್ತಬೆಟ್ಟು, ಅರುಣ್‌ ಶೆಟ್ಟಿ, ಶ್ರೀನಿವಾಸ ಆಚಾರ್ಯ ಸಹಿತ ಹಲವರು ವಿವಿಧ ಸಲಹೆ ಸೂಚನೆ ನೀಡಿದರು. ವಾಸ್ತು ತಜ್ಞರು ಮತ್ತು ಎಂಜಿನಿಯರ್‌ ಸಲಹೆ ಪಡೆದು ಮುಂದುವರಿಯುವ ನಿರ್ಧಾರವನ್ನು ಕೈಗೊಳ್ಳಲಾಯಿತು.

ಶ್ರೀ ಭದ್ರಕಾಳಿ ದೇವಸ್ಥಾನದ ಜೀರ್ಣೋದ್ಧಾರದ ಯಶಸ್ಸಿಗೆ ಬಾಲಕೃಷ್ಣ ಶೆಟ್ಟಿ, ಅರುಣ್‌ ಶೆಟ್ಟಿ ಮತ್ತು ಹರೀಶ ಶೆಟ್ಟಿ ಪಡುಪರ್ಕಳ,ಜಯಕರ ಶೆಟ್ಟಿ, ಶಶಿಧರ ಶೆಟ್ಟಿ, ಹರೀಶ್ ಮಡಿವಾಳ್ ನೇತ್ರತ್ವದಲ್ಲಿ ಮುಂಬಯಿ ಸಮಿತಿ, ದೊಡ್ಡಮನೆ ಮನೋಹರ ಶೆಟ್ಟಿ, ಉದಯ ಶೆಟ್ಟಿ, ವಿಜಯ ಶೆಟ್ಟಿ ನೇತ್ರತ್ವದಲ್ಲಿ ಬೆಂಗಳೂರು ಸಮಿತಿ ಹಾಗೂ ಶಂಕರ ಶೆಟ್ಟಿ, ಸುಧಾಕರ ಶೆಟ್ಟಿ, ಭುಜಂಗ ಶೆಟ್ಟಿ, ಅಶೋಕ್‌ ಎಂ.ಶೆಟ್ಟಿ, ಹೃದಯ ಕುಮಾರ್‌ ಶೆಟ್ಟಿ, ಪ್ರಸನ್ನ ಶೆಟ್ಟಿ, ಶ್ರೀನಿವಾಸ ಆಚಾರ್ಯ, ಜನಾರ್ಧನ ಆಚಾರ್ಯ ಸೇರಿ ಹಲವು ಪ್ರಮುಖರ ನೇತ್ರತ್ವದಲ್ಲಿ ಊರಿನ ಸಮಿತಿಯನ್ನು ರಚಿಸಲಾಯಿತು. ದೊಡ್ಡಮನೆ ರಮೇಶ ಶೆಟ್ಟಿ ಅವರನ್ನು ಕ್ಷೇತ್ರದ ಮತ್ತು ಜೀರ್ಣೋದ್ಧಾರದ ಸಕಲ ವ್ಯವಸ್ಥೆಯ ಉಸ್ತುವಾರಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಅಶೋಕ ಎಂ ಶೆಟ್ಟಿ ಪ್ರಕಟಿಸಿದರು.

ಊರು ಪರವೂರಿನಲ್ಲಿರುವ ಪಡುಕುಡೂರಿನ ಪ್ರಮುಖರು, ಗಣ್ಯರು, ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments