ಕುಂದಾಪುರದಲ್ಲಿ ಐವನ್ ರಿಚರ್ಡ್ ಕೊಲೆ.
ಆರೋಪಿ ಡೆರಿಕ್ ಕ್ರಾಸ್ತ ಬಂಧನ.
ಹೆಬ್ರಿ : ಹೆಬ್ರಿಯಲ್ಲಿ ವಾಸವಿದ್ದ ಐವನ್ ರಿಚರ್ಡ್ ಅವರನ್ನು ಕುಂದಾಪುರ ರಲ್ಲಿ ಶುಕ್ರವಾರ ಮುಂಜಾನೆ ಗುಂಡು ಹಾಕಿ ಕೊಲೆ ಮಾಡಲಾಗಿತ್ತು.ಪ್ರಕರಣದ ಪ್ರಮುಖ ಆರೋಪಿ ಹೆಬ್ರಿ ಮೂಲದ ಡೆರಿಕ್ ಕ್ರಾಸ್ತ ಎಂಬಾತನನ್ನು ಪೊಲೀಸರು ಬಂದಿಸಿದ್ದಾರೆ.
ಆರೋಪಿಯನ್ನು ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಹೇರಬುಡಿಕೆ ಬೆಳಕೆ ಗ್ರಾಮದಲ್ಲಿ ಶನಿವಾರ ಬಂದಿಸಲಾಗಿದೆ.ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು.ಆರೋಪಿಯನ್ನು ನ್ಯಾಯಲಯಕ್ಕೆ ಹಾಜರು ಪಡಿಸಲಾಗುತ್ತದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.


