ಮುನಿಯಾಲು : ಹೆಬ್ರಿ ಕಡೆಯಿಂದ ಮುನಿಯಾಲು ಮಾರ್ಗವಾಗಿ ಕೇರಳ ಕಡೆಗೆ ರಬ್ಬರ್ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಘನ ಲಾರಿಯೊಂದು ಪೈಪ್ ಲೈನ್ ಹಾದು ಹೋದ ಜಾಗದಲ್ಲಿ ಹೂತು ಹೋಗಿ ವಾಲಿದ ಘಟನೆ ಗುರುವಾರ ಸಂಭವಿಸಿದೆ.
ಯಾವೂದೇ ಅನಾಹುತ ಸಂಭವಿಸಿಲ್ಲ. ಲಾರಿಯಲ್ಲಿದ್ದ ಮರದ ತುಂಡುಗಳನ್ನು ಮತ್ತೊಂದು ಲಾರಿಗೆ ಅನ್ ಲೋಡ್ ಮಾಡಲಾಗುತ್ತಿದೆ. ಕೆಲ ಸಮಯದಲ್ಲಿ ಅನ್ ಲೋಡ್ ಕಾರ್ಯ ಮುಗಿಯಲಿದೆ.


