Thursday, September 24, 2026
Homeಹೆಬ್ರಿಹೆಬ್ರಿಯ ಮುತ್ತೂಟ್ ಫೈನಾನ್ಸ್ ನಲ್ಲಿ ಉದ್ಯೋಗಿಯಿಂದ ಮಹಿಳೆಗೆ ವಂಚನೆ- ಹೆಬ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಹೆಬ್ರಿಯ ಮುತ್ತೂಟ್ ಫೈನಾನ್ಸ್ ನಲ್ಲಿ ಉದ್ಯೋಗಿಯಿಂದ ಮಹಿಳೆಗೆ ವಂಚನೆ- ಹೆಬ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಹಣ ಪಡೆದು ಚಿನ್ನ ಬಿಡಿಸಿಕೊಡದ ಉದ್ಯೋಗಿ.

ಹೆಬ್ರಿ : ಹೆಬ್ರಿ ಗ್ರಾಮದ ಶ್ರತಿ (32) ಎಂಬವರು 23/02/2025 ರಂದು ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ತುರ್ತು ಚಿಕಿತ್ಸೆಗಾಗಿ ಹಣದ ಅಗತ್ಯವಿದ್ದುದರಿಂದ ಹೆಬ್ರಿ ಮುತ್ತೂಟ್‌ ಪೈನಾನ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಪರಿಚಯದ ಮಂಜುನಾಥ್ ಅವರಲ್ಲಿ ತಿಳಿಸಿದಾಗ ಅವರು ನಿಮ್ಮಲ್ಲಿ ಚಿನ್ನ ಇದ್ದರೆ ಕೊಡಿ ತಾನು ಪೈನಾನ್ಸ್‌ನಲ್ಲಿ ಇಟ್ಟು ಹಣ ಕೊಡುವುದಾಗಿ ನಂಬಿಸಿದ್ದಾರೆ.

ಅದರಂತೆ ಶ್ರತಿ ಅವರು 3 ಪವನ್‌ ತೂಕದ ಕನಕ ಮಾಲೆ ಸರ -1 ಹಾಗೂ ತಲಾ 4 ಗ್ರಾಂ ತೂಕದ ಕಿವಿಯೋಲೆ 1 ಜೊತೆ, 1.5 ಗ್ರಾಂ ತೂಕದ ಲೇಡಿಸ್‌ ಉಂಗುರ -1, 4 ಪವನ್‌ ತೂಕದ ಹವಳದ ಸರ -1 ನ್ನು ಕೊಟ್ಟು ಹಣ ಕೊಡುವಂತೆ ಕೇಳಿದ್ದು, ಮಂಜುನಾಥ್ 70,000/- ರೂಪಾಯಿ ಹಣವನ್ನು ಶ್ರತಿ ಅವರ ಬ್ಯಾಂಕ್‌ ಖಾತೆಗೆ ಹಾಕಿದ್ದು ಉಳಿದ ಹಣವನ್ನು ಖಾತೆಗೆ ಹಾಕುವುದಾಗಿ ನಂಬಿಸಿ ಅಲ್ಲದೆ ಚಿನ್ನವನ್ನು ಬಿಡಿಸಿ ಕೊಡುವುದಾಗಿ 70,000/- ಹಣವನ್ನು ಗೂಗಲ್‌ ಪೇ ಮುಖಾಂತರ ಹಾಕಿಸಿಕೊಂಡಿದ್ದು ಇದುವರೆಗೂ ಹಣವನ್ನು ಕೊಡದೆ, ಚಿನ್ನವನ್ನು ಬಿಡಿಸಿ ಕೊಡದೆ ನಂಬಿಕೆ ದ್ರೋಹ ಎಸಗಿ ಮೋಸ ಮಾಡಿರುವ ಬಗ್ಗೆ

ಶ್ರತಿ ಅವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2026 ಕಲಂ: 316(2) 318(2) BNS ರಂತೆ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!