Thursday, September 24, 2026
Homeಹೆಬ್ರಿಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಕೆಪಿಸಿಸಿ ಉಸ್ತುವಾರಿ ಪದ್ಮಪ್ರಸಾದ್ ಜೈನ್ ಭೇಟಿ- ಸಮಗ್ರ ಮಾಹಿತಿ ನೀಡಿದ...

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಕೆಪಿಸಿಸಿ ಉಸ್ತುವಾರಿ ಪದ್ಮಪ್ರಸಾದ್ ಜೈನ್ ಭೇಟಿ- ಸಮಗ್ರ ಮಾಹಿತಿ ನೀಡಿದ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್.

ಹೆಬ್ರಿ : ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಎಸ್ ಐಆರ್ ಕೆಪಿಸಿಸಿ ಉಸ್ತುವಾರಿ ಪದ್ಮಪ್ರಸಾದ್ ಜೈನ್ ಶುಕ್ರವಾರ ಭೇಟಿ ನೀಡಿ ಎಸ್ ಐಆರ್ ನ ಬಗ್ಗೆ ಸಮಗ್ರ ಮಾಹಿತಿ ಪಡೆದರು.
ಮುಂದೆ SIR ಬಗ್ಗೆ ಹೇಗೆ ಕಾರ್ಯಪ್ರವೃತ್ತರಾಗಬೇಕೆಂದು ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷರುಗಳಿಗೆ ಮಾಹಿತಿ ನೀಡಿದರು.

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಯಾಲು ಗೋಪಿನಾಥ್ ಭಟ್ SIR ಬಗ್ಗೆ ಬ್ಲಾಕ್ ನಲ್ಲಿ ನಡೆದ ಕಾರ್ಯ ಚಟುವಟಿಕೆಯ ವಿಸ್ತೃತ ಮಾಹಿತಿಯನ್ನು ಉಸ್ತುವಾರಿ ಪದ್ಮಪ್ರಸಾದ್ ಜೈನ್ ಅವರಿಗೆ ನೀಡಿದರು

ಹೆಬ್ರಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷರಾದ
ಸಂದೀಪ್ ಶೆಟ್ಟಿ ಅಜೆಕಾರು, ದಯಾನಂದ ಶೆಟ್ಟಿ ಚಾರ, ಸಂದೀಪ್ ಆಚಾರ್ಯ ಹೆಬ್ರಿ, ಭಾರವಿ ಹೆಗ್ಡೆ ಪಡುಕುಡೂರು, ಹೆಬ್ರಿ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ್ ಸೇರಿಗಾರ್, ಹೆಬ್ರಿ ಬ್ಲಾಕ್ ಕಾರ್ಯದರ್ಶಿ ಜನಾರ್ದನ್ ಎಚ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ವಕ್ತಾರ ನಿತೀಶ್ ಎಸ್ ಪಿ, ಮರ್ವಿನ್ ಲೋಬೋ, ಪ್ರಸಾದ್ ಜೈನ್ ಈದು ಉಪಸ್ಥಿತರಿದ್ದರು.

ಚಾರ ಗ್ರಾಮ ಪಂಚಾಯತಿ ಪೂರ್ವಾಧ್ಯಕ್ಷ
ಚಾರ ದಿನೇಶ್ ಶೆಟ್ಟಿ ಸ್ವಾಗತಿಸಿದರರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!