ಅಜೆಕಾರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಜೆಕಾರು ವಲಯದ ಮರ್ಣೆ ಒಕ್ಕೂಟದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಅಮ್ಮ ಜ್ಞಾನವಿಕಾಸ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ಶಾಮರಾಯ ಆಚಾರ್ಯ ವಹಿಸಿಕೊಂಡಿದ್ದರು.
ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ನಂದಕುಮಾರ್ ಹೆಗ್ಡೆ, ಪ್ರಮುಖರಾದ ಅಲೆಕ್ಸ್ ಡಿಸೋಜಾ, ಗುರುಪ್ರಸಾದ್ ರಾವ್, ನಿತ್ಯಾನಂದ ಸುವರ್ಣ, ಯಶೋಧ ಶೆಟ್ಟಿ, ಅಜೆಕಾರು ವಲಯದ ಮೇಲ್ವಿಚಾರಕಿ ನಿಷ್ಮಿತಾ, ಅಧ್ಯಕ್ಷ ಶಂಕರ ಆಚಾರ್ಯ, ಒಕ್ಕೂಟದ ಅಧ್ಯಕ್ಷರಾದ ಪ್ರವೀಣ್ ಮಡಿವಾಳ, ಸೇವಾ ಪ್ರತಿನಿಧಿ ವಿಜಯ ಕಾಮತ್, ಒಕ್ಕೂಟದ ಜೊತೆ ಕಾರ್ಯದರ್ಶಿ ಲಕ್ಷ್ಮಿ ಪೂಜಾರಿ, ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷ ರತ್ನ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 32 ಬಗೆಯ ಹಳೆ ಸಂಪ್ರದಾಯದ ತಿನಿಸುಗಳನ್ನು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಮಾಡುವುದರ ಮೂಲಕ ಕೇಂದ್ರದ ಎಲ್ಲಾ ಸದಸ್ಯರನ್ನು ಸೇರಿಸಿ ಕಾರ್ಯಕ್ರಮವನ್ನು ಆಚರಿಸಲಾಯಿತು.



