Thursday, September 24, 2026
Homeಹೆಬ್ರಿದೆಹಲಿಯ ದಲಿತರ ಕಾಲೊನಿಗಳಲ್ಲಿ ಪೇಜಾವರ ಶ್ರೀ ಸಂಚಾರ.

ದೆಹಲಿಯ ದಲಿತರ ಕಾಲೊನಿಗಳಲ್ಲಿ ಪೇಜಾವರ ಶ್ರೀ ಸಂಚಾರ.

ಎಷ್ಟೇ ಸವಾಲುಗಳು ಬಂದರೂ ಸಂಘಟಿತರಾಗಿರಿ : .ಶ್ರೀ ವಿಶ್ವಪ್ರಸನ್ನ ತೀರ್ಥರ ಕರೆ

ನವದೆಹಲಿಯ ರೋಹಿಣಿ ಕ್ಷೇತ್ರದ ಸೆಕ್ಟರ್ 4 ರಲ್ಲಿ 300ಕ್ಕೂ ಅಧಿಕ ಮಂದಿ ವಾಸಿಸುವ ದಲಿತರ ಬಡಾವಣೆಯಲ್ಲಿ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರನ್ನತೀರ್ಥರು ಆಗಮಿಸಿದ್ದಕ್ಕಾಗಿ ಸಮಸ್ತರೂ ಭಾವುಕರಾಗಿದ್ದರು.

ಶ್ರೀಗಳನ್ನು ಹೂವಿನ ಮಳೆಗರೆದು ಬಡಾವಣೆಯ ರಸ್ತೆಗಳಲ್ಲಿ ರಂಗೋಲಿಯಿಂದ ಅಲಂಕರಿಸಿ ಭಕ್ತಿಯಿಂದ ಸ್ವಾಗತಿಸಿದ ಪರಿ ಅಪೂರ್ವವಾಗಿತ್ತು. ವಿಶ್ವಹಿಂದು ಪರಿಷತ್ ಮತ್ತು ಸೇವಾಭಾರತಿಯ ಸಹಯೋಗದಲ್ಲಿ ತಮ್ಮ 39 ಚಾತುರ್ಮಾಸ್ಯ ವ್ರತದ ಅಂಗವಾಗಿ ಈ ಬಡಾವಣೆ ಭೇಟಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮುಂದಿನ 3 ಭಾನುವಾರಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಶ್ರೀರಾಮ ಮಂತ್ರದ ಜಯಘೋಷದೊಂದಿಗೆ ನೂರಾರು ಮಂದಿಯೊಂದಿಗೆ ಶ್ರೀಗಳು ಬಡಾವಣೆಯಲ್ಕಿ ಸಂಚರಿಸಿದರು. ಆರಂಭದಲ್ಲಿ 5 ಮನೆಗಳಿಗೆ ತೆರಳಿ ಶ್ರೀ ಮಠದ ವತಿಯಿಂದಲೇ ಒದಗಿಸಿದ ಶ್ರೀರಾಮ‌ಹಾಗೂ ಉಡುಪಿ ಕೃಷ್ಣನ ಫೋಟೋಗಳನ್ನಿಟ್ಡು ಸಣ್ಣ ದೀಪಗಳನ್ನು ಬೆಳಗಿದರು.

ಮನೆಮಂದಿಯಂತೂ ಶ್ರೀಗಳ ಕಾಲಿಗೆ ನೀರೆರೆದು ಆರತಿ ಬೆಳಗಿ ಮಾಲಾರ್ಪಣೆಗೈದು ಭಕ್ತಿಯಿಂದ ಬರಮಾಡಿಕೊಂಡರು. ಬಳಿಕ ಮನೆಯ ಪ್ರತಿಯೊಬ್ವರ ಹೆಸರು ಉದ್ಯೋಗ ಶಿಕ್ಷಣ ಇತ್ಯಾದಿಗಳನ್ನು ಕೇಳಿ , ಉಭಯಕುಲೋಪರಿ ನಡೆಸಿದರು.

ಮನೆಮಂದಿಗೆ 10 ಬಾರಿ ರಾಮಮಂತ್ರವನ್ನು ಉಪದೇಶಿಸಿ, ಪ್ರಸಾದ ನೀಡಿ ಆಶೀರ್ವದಿಸಿದರು. ನಿತ್ಯ ರಾಮ ಕೃಷ್ಣರ ಮಂತ್ರ ಜಪಿಸುವಂತೆ ಸೂಚಿಸಿದರು. ಬಳಿಕ ಬಡಾವಣೆಯ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳನ್ನು ಗೌರವಿಸಿದರು.

ರಾಮಮಂದಿರದಿಂದ ರಾಮರಾಜ್ಯದೆಡೆಗೆ ಶ್ರೀಗಳು…ರಾಮಮಂದಿರದಿಂದ ರಾಮರಾಜ್ಯದೆಡೆಗೆ ತೆರಳುವ ಬಗೆಯನ್ನು ವಿವರಿಸಿದರು. ಸನಾತನ ಧರ್ಮಕ್ಕೆ ಆಂತರಿಕವಾಗಿ ಬಹಿರಂಗವಾಗಿ ಬಗೆಯ ಬಗೆಯ ಸವಾಲುಗಳು ಎದುರಾಗ್ತಿವೆ. ಆದರೆ ಎಂದಿಗೂ ನಮ್ಮ ಒಗ್ಗಟ್ಟನ್ನು ಬಿಡದೇ ಸವಾಲುಗಳನ್ನು ಎದುರಿಸಬೇಕು. ರಾಮಕೃಷ್ಣರ ತಾರಕ ಮಂತ್ರ ಮನೆಮಂದಿ ಎಲ್ಲ ಸೇರಿ ನಿತ್ಯ ಮಾಡಬೇಕು. ಮೈ ಮನಸ್ಸು ಬುದ್ಧಿ , ಪ್ರತೀ ಮನೆಗಳು ನಮ್ಮ ನಮ್ಮ ಬಡಾವಣೆ ಊರು ಕೇರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದೂ ರಾಮರಾಜ್ಯದ ಭಾಗವೇ ಆಗಿದೆ.

ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ರಾಷ್ಟ್ರದ ಉತ್ತಮ ನಾಗರಿಕರಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಶಾಸಕ ಕುಲವಂತ ರಾಣಾ ಅವರಲ್ಲಿ ಬಡಾವಣೆಯ ಸ್ವಚ್ಛತೆ , ಮೂಲಭೂತ ಸೌಕರ್ಯಗಳ ನವೀಕರಣ ತುಂಬ ಹಳೆಯದಾಗಿರುವ ಮನೆಗಳನ್ನು ಕಾರ್ಪೊರೇಟ್ ಕಂಪೆನಿಗಳ ಸಹಾಯವನ್ನಾದರೂ ಪಡೆದು ದುರಸ್ತಿಗೊಳಿಸಿಕೊಡುವಂತೆ ಸೂಚಿಸಿದರು.‌

ಸ್ಥಳೀಯ ವಿಹಿಂಪ ಮತ್ತು ಸೇವಾಭಾರತಿಯ ಮುಖಂಡರು ಕಾರ್ಯಕರ್ತರು ವ್ಯವಸ್ಥೆಯಲ್ಲಿ ಸಹಕರಿಸಿದರು. ಮಠದ ವತಿಯಿಂದ ಎಲ್ಲರಿಗೂ ರಾಮ‌- ಕೃಷ್ಣ ರ ಫೋಟೋ , ಸಿಹಿ ತಿಂಡಿಯುಳ್ಳ ಪ್ರಸಾದದ ಕಿಟ್ ನ್ನು ಸ್ವಾಮೀಜಿಯವರು ವಿತರಿಸಿದರು‌.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!