Wednesday, September 23, 2026
Homeಕಾರ್ಕಳಕಾರ್ಕಳ:ಸರ್ಕಾರಿ ಉದ್ಯೋಗ ಕುರಿತು ಮಾಹಿತಿ ಕಾರ್ಯಗಾರ ಹಾಗೂ ಚಿಂತನ ಶಿಬಿರ

ಕಾರ್ಕಳ:ಸರ್ಕಾರಿ ಉದ್ಯೋಗ ಕುರಿತು ಮಾಹಿತಿ ಕಾರ್ಯಗಾರ ಹಾಗೂ ಚಿಂತನ ಶಿಬಿರ

ಎನ್ ಎಸ್ ಅಕಾಡೆಮಿ ಹಾಗೂ ಎನ್ ಎನ್ ಓ ಕಮ್ಯೂನಿಟಿ ಸೆಂಟರ್ ಕಾರ್ಕಳ ಇವರ ವತಿಯಿಂದ ಸರ್ಕಾರಿ ಉದ್ಯೋಗದತ್ತ ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇರೇಪಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸೂಕ್ತ ಮಾಹಿತಿ ನೀಡುವುದು ಹಾಗೂ ಸರ್ಕಾರಿ ಸೇವೆಯಲ್ಲಿ ಸಮುದಾಯದ ಪಾತ್ರವನ್ನು ಬಲಪಡಿಸುವ ಉದ್ದೇಶದಿಂದ ಎನ್.ಎಸ್. ಅಕಾಡೆಮಿ ಹಾಗೂ ಎನ್.ಎನ್.ಓ ಕಮ್ಯೂನಿಟಿ ಸೆಂಟರ್, ಕಾರ್ಕಳ ಇವರ ವತಿಯಿಂದ “ಸರ್ಕಾರಿ ಉದ್ಯೋಗದಲ್ಲಿ ಸಮುದಾಯದ ಪಾತ್ರ” ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ಚಿಂತನ ಶಿಬಿರ ಇಂದು ಕಾರ್ಕಳದ ಎನ್.ಎಸ್. ಅಕಾಡೆಮಿಯಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಎನ್ ಎಸ್ ಅಕಾಡೆಮಿ ಹಾಗೂ ಎನ್ ಎನ್ ಓ ಕಮ್ಯೂನಿಟಿ ಸೆಂಟರ್ ಕಾರ್ಕಳ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಅಧ್ಯಕ್ಷ ಡಾ. ರಿಜ್ವಾನ್ ಅಹಮದ್ ಕಾರ್ಕಳ, ನಮ್ಮ ನಾಡ ಒಕ್ಕೂಟ ಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಸಲೀಂ ಮೂಡಬಿದ್ರೆ ,ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿ ಕೋಶಾಧಿಕಾರಿ ಫಿರು ಸಾಹೇಬ್ ಉಡುಪಿ , ನಮ್ಮ ನಾಡ ಒಕ್ಕೂಟ ಟ್ರಸ್ಟಿಗಳಾದ ಮೊಹಮ್ಮದ್ ಹುಸೇನ್ ಕಾರ್ಕಳ , ಅಬ್ದುಲ್ ಹಮೀದ್ ಮೂಡಬಿದ್ರೆ, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷ ನಕ್ವ ಯಾಹ್ಯ , ಪುರಸಭೆ ಸದಸ್ಯ ಅಶ್ಫಾಕ್ ಅಹ್ಮದ್ ಕಾರ್ಕಳ, ಕೆ.ಎಂ.ಇ.ಎಸ್ ಅಧ್ಯಕ್ಷ ಕೆ.ಎಸ್.ಇಮ್ತಿಯಾಜ್ , ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಜಿಲ್ಲಾ ಉಪಾಧ್ಯಕ್ಷ ನಾಸೀರ್ ಶೇಖ್ , ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್ ಆಯಿಷಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಖಾಸಿಂ, ಉಪಸ್ಥಿರಿದ್ದರು.

ತರಬೇತುದಾರರಾಗಿ ನೌಜಲ್ ಮುಲ್ಕಿ ಹಾಗೂ ಅಬ್ದುಲ್ ರಜಾಕ್ ಮಾಹಿತಿ ನೀಡಿದರು. ಸರ್ಕಾರಿ ಉದ್ಯೋಗ ಪಡೆದ ಅಹಮದ್ ಎಫ್ ಎಚ್ , ಸಾದತ್ ಯಾಸಿನ್ ಹಾಗೂ ತರಬೇತುದಾರ ನೌಜಲ್ ಮುಲ್ಕಿ, ಅಬ್ದುಲ್ ರಜಾಕ್ ರವರನ್ನು ಸನ್ಮಾನಿಸಲಾಯಿತು. ಮೌಲಾನಾ ಹಫೀಝ್ ಕಾಸಿಮಿ ಕಿರಾತ್ ಪಠಿಸಿದರು. ಎನ್ ಎಸ್ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ ಎಸ್ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ಶುಕುರ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು.ಎನ್ ಎಸ್ ಅಕಾಡೆಮಿ ಕೋಶಾಧಿಕಾರಿ ಶಾಕಿರ್ ಶೀಶ್ ಸ್ವಾಗತಿಸಿದರು. ಎನ್ ಎನ್ ಓ ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಮುಸ್ತಾಫಾ ಕಾರ್ಕಳ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!