ವಿಕಾಸ ಸೌದದಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಜಿಲ್ಲೆಯ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿಶೇಷ ಸಭೆ.
ಥೀಮ್ ಪಾರ್ಕ್ ಅಭಿವೃದ್ದಿಗೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡು ಅನುಷ್ಠಾನಕ್ಕೆ ನಿರ್ಧಾರ.
ಸರಕಾರದ ಕ್ರಮವನ್ನು ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದ ಕಾರ್ಕಳ ಕಾಂಗ್ರೆಸ್.
ಕಾರ್ಕಳ : 2023 ರ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ಕಾರ್ಕಳ ಬೈಲೂರಿನ ಉಮ್ಮಿಕಲ್ ಬೆಟ್ಟದ ಮೇಲೆ ನಿರ್ಮಾಣಗೊಂಡ ಪರಶುರಾಮನ ಕಂಚಿನ ನಕಲಿ ಪ್ರತಿಮೆಗೆ ಮುಕ್ತಿ ಸಿಗುವ ಕಾಲ ಬಂದಿದೆ, ಕಂಚಿನ ಪ್ರತಿಮೆ ನಿರ್ಮಾಣ ಮಾಡಿದ್ದೇವೆ ಎಂದು ಸುಳ್ಳು ಹೇಳಿ ರಾಜ್ಯದ ಮುಖ್ಯ ಮಂತ್ರಿಯನ್ನು ಕರೆಸಿ ಉದ್ಘಾಟಿಸಿ ಧರ್ಮದ್ರೋಹದ ಕೆಲಸ ಮಾಡಿ ನಂತರ ಅದನ್ನು ಸಮರ್ಥಿಸಲು ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಶಾಸಕ ಸುನೀಲ್ ಕುಮಾರ್ ನಾಟಕಕ್ಕೆ ಅಂಕದ ಪರದೆ ಬೀಳುವ ಕಾಲ ಬಂದಿದೆ. ತಪ್ಪನ್ನು ಪ್ರಶ್ನೆ ಮಾಡಿದ ಹೋರಾಟಗಾರರನ್ನು, ಕಾರ್ಯಕರ್ತರನ್ನು ಅವಮಾನಿಸಿ ಅಪಹಾಸ್ಯಗೈದವರು ಪಶ್ಚಾತ್ತಾಪ ಪಡುವ ಕಾಲ ಸನ್ನಿಹಿತವಾಗಿದೆ. ಯಾಕೆಂದರೆ ರಾಜ್ಯ ಸರಕಾರವು ಪರಶುರಾಮನ ಅಸಲಿ ಪ್ರತಿಮೆ ಪುನರ್ ನಿರ್ಮಾಣ ಹಾಗೂ ಪಾರ್ಕ್ ಅಭಿವೃದ್ಧಿಯ ಬಗ್ಗೆ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
ಮಂಗಳವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಹರ್ಷದ್ ರವರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಕೆಲವು ಪ್ರಮುಖ ನಿರ್ಣಯವನ್ನು ಕೈಗೊಂಡು ಅನುಷ್ಠಾನಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿಯವರು ಹೈಕೋರ್ಟಿಗೆ ಸಲ್ಲಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಪುರಸ್ಕರಿಸಿ ಕೋರ್ಟ್ ನೀಡಿದ ಮಾರ್ಗದರ್ಶನದಂತೆ ಸರಕಾರ ಪ್ರಮುಖ ನಿರ್ಧಾರವನ್ನು ಕೈಗೊಂಡಿದ್ದು ಸರಕಾರದ ಈ ನಡೆಯನ್ನು ಕಾರ್ಕಳ ಕಾಂಗ್ರೆಸ್ ಸ್ವಾಗತಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ತಿಳಿಸಿದ್ದಾರೆ
ಪ್ರತಿಮೆ ಪುನರ್ ನಿರ್ಮಾಣದ ಬಗ್ಗೆ ತಾಂತ್ರಿಕ ಪರಿಣಿತರ ( technical expert) ಸಲಹೆ ಪಡೆಯುವುದು, ಪಾರ್ಕಿನ ಗೋಮಾಳ ಜಮೀನನ್ನು ಥೀಮ್ ಪಾರ್ಕ್ ಹೆಸರಿಗೆ ವರ್ಗಾಹಿಸಲು ಅಗತ್ಯ ಕ್ರಮವಹಿಸುವುದು, ಪಾರದರ್ಶಕವಾಗಿ ಕಾಮಗಾರಿ ನಡೆಸಲು ಹೊಸ ಟೆಂಡರ್ ಕರೆಯುವುದು ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಉಡುಪಿ ಜಿಲ್ಲಾಧಿಕಾರಿಯವರ ಉಪಸ್ಥಿತಿಯಲ್ಲಿ ನಿರ್ಧರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಶಾಸಕರಿಂದ ಮತ್ತೊಂದು ನಾಟಕ :
ಥೀಮ್ ಪಾರ್ಕ್ ವಿಚಾರವಾಗಿ ಮಂಗಳವಾರ ವಿಕಾಸಸೌದದಲ್ಲಿ ಸಭೆ ನಡೆಯುತ್ತಿದ್ದಂತೆ ಕಾರ್ಕಳ ಶಾಸಕರ ಹೊಸ ನಾಟಕ ಪ್ರಾರಂಭವಾಗಿದೆ ಸಭೆ ಮುಗಿದ ಸ್ವಲ್ಪ ಹೊತ್ತಿನಲ್ಲಿಯೇ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನಿಂದ ಕಾರ್ಕಳಕ್ಕೆ ವಾಹನ ಜಾಥ ಎಂಬ ಪೋಸ್ಟರ್ ಶಾಸಕ ಆಪ್ತರ ಸಾಮಾಜಿಕ ಜಾಲತಾಣದಲ್ಲಿ ಮತ್ತು ವೆಬ್ ನ್ಯೂಸ್ ಗಳಲ್ಲಿ ಹರಿದಾಡುತ್ತಿದೆ, ಈ ಹಿಂದೆ ಎರಡು ಬಾರಿ ವಾಹನ ಜಾಥ ಆಯೋಜನೆ ಮಾಡಿ ಜನ ಸ್ಪಂದನೆ ಇಲ್ಲದ ಕಾರಣ ರದ್ದು ಮಾಡಲಾಗಿತ್ತು ಆದರೆ ಈ ಬಾರಿಯ ಜಾಥ ವಿಚಿತ್ರವಾಗಿದೆ ಬೆಂಗಳೂರಿಗೆ ತೆರಳಿ ಮನವಿ ಸಲ್ಲಿಸಬೇಕಾದವರು ಬೆಂಗಳೂರಿನಿಂದ ಕಾರ್ಕಳಕ್ಕೆ ಹಿಂದಕ್ಕೆ ಹೊರಟ್ಟಿದ್ದಾರೆ ಪಾರ್ಕಿನಲ್ಲಿ ಮುಂದೆ ನಡೆಯುವ ಕಾಮಗಾರಿಗಳು ನನ್ನ ಹೋರಾಟದ ಫಲವಾಗಿದೆ ಎಂದು ಬಿಂಬಿಸಲು ಈ ಜಾಥಾ ಆಯೋಜನೆ ಮಾಡಲಾಗಿದೆ ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಅವರು ತಿಳಿದುಕೊಳ್ಳಬೇಕಾಗಿದೆ.
ರಾಜ್ಯ ಸರಕಾರದ ದಿಟ್ಟ ನಿರ್ಧಾರದಿಂದ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಮತ್ರೊಂದು ಹಂತದ ಜಯ ಸಿಕ್ಕಿದಂತಾಗಿದೆ ಪ್ರಶ್ನಿಸಿದವರ ಮೇಲೆ ಪೋಲಿಸ್ ಕೇಸ್, ಅಧಿಕಾರಿಗಳು ಅನುಭವಿಸಿದ ಹಿಂಸೆ, ಕಾರ್ಯಕರ್ತರ ಜಿದ್ದಾಜಿದ್ದಿನ ಸಂಘರ್ಷಗಳು, ಅರೋಪ ಪ್ರತ್ಯಾರೋಪಗಳಿಗೆ ಕೊನೆ ಹಾಡುವ ಕಾಲ ಸನ್ನಿಹಿತವಾಗಿದೆ ಸರಕಾರದ ಈ ನಡೆಗೆ ಯಾವುದೇ ತಡೆ ಮಾಡದೆ ಸಹಕರಿಸುವ ಬುದ್ದಿಯನ್ನು ಶಾಸಕರಿಗೆ ಮತ್ತು ಅವರ ಆಪ್ತರಿಗೆ ಪರಶುರಾಮನೇ ಕರುಳಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶುಭದ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



