ಮುಂಬಯಿ : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾದ ಯುವ ಉದ್ಯಮಿ ಸಮಾಜಸೇವಕ ಪಡುಕುಡೂರು ಪಡುಪರ್ಕಳ ಹರೀಶ್ ಶೆಟ್ಟಿ ಮುಂಬಯಿ ಅವರಿಗೆ ಬಂಟರ ಸಂಘ ಮುಂಬಯಿ ಡೊಂಬಿವಿಲಿ ರೀಜನ್ ವತಿಯಿಂದ ನಡೆಸ ಸಮಾರಂಭದಲ್ಲಿ ನಾಡಿಗೆ ಸಲ್ಲಿಸಿದ ವಿಶೇಷ ಸೇವೆಗಾಗಿ ಅಭಿಮಾನದ ಸನ್ಮಾನ ನಡೆಯಿತು.
ಕಠಿಣ ಪರಿಶ್ರಮದ ಮೂಲಕ ಸಣ್ಣ ವಯಸ್ಸಿನಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಸರಳ ಸ್ವಭಾವದ ಹರೀಶ್ ಶೆಟ್ಟಿಯವರು ಉದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತ ಆದರ್ಶರಾಗಿದ್ದಾರೆ.
ಬೊಂಬಾಯಿಯಲ್ಲಿ ಪಡುಕುಡೂರಿನ ಹೆಸರನ್ನು ಎಲ್ಲರ ಗಮನಿಸುವಂತೆ ಮಾಡಿ ಹುಟ್ಟೂರಿನ ಹೆಸರನ್ನು ಕರ್ಮಭೂಮಿಯಲ್ಲಿ ಎತ್ತರಕ್ಕೆ ಏರಿಸಿದ ಕೀರ್ತಿ ಪಡುಕುಡೂರು ಹರೀಶ ಶೆಟ್ಟಿಯವರಿಗೆ ಸಲ್ಲುತ್ತದೆ. ಪಡುಕುಡೂರಿನ ಹೆಸರು ಎಲ್ಲರ ಬಾಯಲ್ಲೂ ಬರುವಂತೆ ಮಾಡಿದ್ದಾರೆ. ಹುಟ್ಟೂರನ್ನು ಸದಾ ನೆನಪಿಸುತ್ತ “ಪಡುಕುಡೂರು” ಎಂದು ಹೇಳುತ್ತ ಬಂದವರು ಎಂದು ಹರೀಶ ಶೆಟ್ಟಿಯವರ ತೆರೆಮರೆಯ ಜನಸೇವೆಯನ್ನು ಮುಂಬಯಿಯಲ್ಲಿ ಗಣ್ಯರು ಕೊಂಡಾಡಿದರು.
ಸ್ವಾತಂತ್ರ್ಯಹೋರಾಟಗಾರ ಪಡುಕುಡೂರುಬೀಡು ಎಂ.ಡಿ. ಅಧಿಕಾರಿ ಅವರ ಪುತ್ಥಳಿ ಪ್ರತಿಷ್ಠಾಪನಾ ಸಮಿತಿಯ ಸಂಚಾಲಕರಾಗಿ ಪಡುಪರ್ಕಳ ಶಂಕರ ಶೆಟ್ಟಿ ಮತ್ತು ಪಟೇಲರ ಮನೆ ಜಗದೀಶ ಹೆಗ್ಡೆಯವರ ಮುಂದಾಳತ್ವದಲ್ಲಿ ಊರಪರವೂರ ಸರ್ವರ ಸಹಕಾರದಲ್ಲಿ ಎಂ.ಡಿ. ಅಧಿಕಾರಿ ಅವರ ಪುತ್ಥಳಿ ಪ್ರತಿಷ್ಠಾಪನೆಯನ್ನು ನೆರವೇರಿಸಿದ ಹೆಗ್ಗಳಿಕೆ ಸಲ್ಲುತ್ತದೆ. ವಿವಿಧ ಸಂಘಸಂಸ್ಥೆಯಲ್ಲಿ ಸಕ್ರೀಯರಾಗಿ ಜನಸೇವೆಯಲ್ಲಿ ತೊಡಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.




