ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ ನೇತ್ರತ್ವದಲ್ಲಿ ಗ್ರಾಮಸ್ಥರಿಂದ ಹೆಬ್ರಿ ತಹಶೀಲ್ಧಾರ್ ಗೆ ಮನವಿ.
ಹೆಬ್ರಿ : ಹೆಬ್ರಿಯ ಸಾಂತೊಳ್ಳಿ ಮಣಿಗುಂಡಿ ಕಾರ್ಕಳ ಜಡ್ಡಿಗೆ ಹೋಗಲು ರಸ್ತೆ ಸಮಸ್ಯೆಯಿದ್ದು ನಮಗೆ ರಸ್ತೆ ನಿರ್ಮಾಣ ಮಾಡಿ ಕೊಡಿ ಎಂದು ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ ನೇತ್ರತ್ವದಲ್ಲಿ ಗ್ರಾಮಸ್ಥರು ಶುಕ್ರವಾರ ಹೆಬ್ರಿ ತಹಶೀಲ್ಧಾರ್ ಗೆ ಮನವಿ ಸಲ್ಲಿಸಿದರು.
ಹೆಬ್ರಿ ಗ್ರಾಮದ ಸಾಂತೊಳ್ಳಿ ಮಣಿಗುಂಡಿ ಕಾರ್ಕಳ ಜಡ್ಡು ಪರಿಸರದ ಮನೆಗಳಿಗೆ ಹೋಗಲು ಹೆಬ್ರಿ, ಬಚ್ಚಪ್ಪು, ಕಬ್ಬಿನಾಲೆ ಮುಖ್ಯರಸ್ತೆಯಿಂದ 3 ಕಿಲೋಮೀಟರ್ ಕ್ರಮಿಸಬೇಕಾಗಿದೆ. ಆ ಪ್ರದೇಶದಲ್ಲಿ ಬಹಳಷ್ಟು ಮನೆಗಳಿರುವ ಕಾರಣ ಸರಿಯಾದ ರಸ್ತೆ ಇಲ್ಲ. ಇದ್ದ ರಸ್ತೆಯು ಕಲ್ಲು ಹೊಂಡ ಕೆಸರಿನಿಂದ ಕೂಡಿದ್ದು, *ನಡೆದುಕೊಂಡು ಹೋಗುವುದೆ ಕಷ್ಟವಾಗಿದೆ. ಪ್ರತಿನಿತ್ಯ ಹಾಲಿನ ಡೈರಿಗೆ ಹಾಲು ಕೊಡುವವರು ಶಾಲೆಗೆ ಹೋಗುವ ಮಕ್ಕಳು ಹಿರಿಯರು ಸೇರಿ ಎಲ್ಲರೂ ಕಷ್ಟದಲ್ಲೇ ಹೋಗುವ ಪರಿಸ್ಥಿತಿ ಇದೆ.
ಮಳೆಗಾಲದಲ್ಲಿ ಮಣಿಗುಂಡಿ ಹೊಳೆಯು ತುಂಬಿ ಹರಿಯುತ್ತದೆ.
ಸೇತುವೆ ಇಲ್ಲದೆ ಹೊಳೆಯನ್ನು ಜೀವದ ಹಂಗು ತೊರೆದು ನಡೆದುಕೊಂಡು ದಾಟ ಬೇಕಾಗಿರುತ್ತದೆ
ತುರ್ತು ಸಂದರ್ಭದಲ್ಲಿ ರಸ್ತೆ ಸರಿ ಇಲ್ಲದೆ ಸೇತುವೆ ಇಲ್ಲದೆ ಬಾಡಿಗೆ ವಾಹನಗಳು ಬರುವುದಿಲ್ಲ
ಮೊಬೈಲ್ ನೆಟ್ವರ್ಕ್ ಸಂಪರ್ಕ ಇಲ್ಲದೆ ತುಂಬಾ ತೊಂದರೆಯಾಗುತ್ತದೆ
ಈ ಎಲ್ಲಾ ಮೂಲಭೂತ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು, ಯಾವುದೇ ಪ್ರಯೋಜನವಾಗಲಿಲ್ಲ
ಎಂದು ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ ತಹಶೀಲ್ಧಾರ್ ಗೆ ಮನವರಿಕೆ ಮಾಡಿದರು.ಕೂಡಲೇ ಸೇತುವೆ ನಿರ್ಮಿಸಿ, ಮಣ್ಣಿನ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡುವಂತೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ರಜಿನಿ, ಮಂಜುನಾಥ್, ರಮೇಶ್ ಕುಲಾಲ್, ಕರುಣಾಕರ ಹೆಗಡೆ, ಕೃಷ್ಣ ಹೆಗಡೆ, ಬೇಬಿ, ಸುಂದರ ಕುಲಾಲ್, ಲಲಿತ, ರವೀಂದ್ರ ಕುಲಾಲ್, ಸೀನ ಕುಲಾಲ್, ನಾರಾಯಣ, ಅಮ್ಮಣಿ, ಅರವಿಂದ ಆಚಾರ್ಯ ಮುಂತಾದವರು ಹಾಜರಿದ್ದರು.




