ಉಡುಪಿ : ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾದಿವಂತರ ಒಕ್ಕೂಟದ ಉಡುಪಿ ಜಿಲ್ಲೆಯ ಮೊದಲ ಸಾಮರಸ್ಯ ಸಭೆಯನ್ನು ಸೆಷ್ಟಂಬರ್ 09 ರಂದು ಬುಧವಾರ ಸಂಜೆ 4 ಗಂಟೆಗೆ ಉಡುಪಿಯ ಕಡಿಯಾಳಿ ದೇವಸ್ಥಾನದಲ್ಲಿ ಮತ್ತು ಸೆಷ್ಟಂಬರ್ 10 ರಂದು ಶುಕ್ರವಾರ ಸಂಜೆ 4 ಗಂಟೆಗೆ ಸಾಸ್ತಾನದ ತುಂಗರ ಮಠದಲ್ಲಿ ಸಭೆ ಕರೆಯಲಾಗಿದೆ.
ತಸ್ತೀಕು ವಿಚಾರ, ಅರ್ಚಕರಿಗೆ ಸಾಮಾಜಿಕ ಭದ್ರತೆ, ಐಡಿ ಕಾರ್ಡ್ ಪಡೆಯುವುದು ಮತ್ತು
ದೇವಳಗಳಲ್ಲಿ ಇತರರಿಂದಾಗುತ್ತಿರುವ ಕಿರುಕುಳಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಶ್ರಾವಣ ಮಾಸ, ಸೋಣೆಯಾರತಿ ಇರುವ ಕಾರಣ ಅರ್ಚಕರುಗಳಿಗೆ ತೊಂದರೆ ಆಗಬಾರದೆಂದು ಕೇವಲ ಒಂದು ಗಂಟೆ ( 4ರಿಂದ – 5 ಗಂಟೆ ವರೆಗೆ ) ಮಾತ್ರ ಸಭೆ ಆಯೋಜನೆ ಮಾಡಲಾಗಿದೆ ಎಂದು ಉಡುಪಿ ಘಟಕದ ಜಿಲ್ಲಾಧ್ಯಕ್ಷರು ಯು. ವೆಂಕಟೇಶ ಅಡಿಗ ಉಳ್ತೂರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ – ಉಡುಪಿ ಘಟಕದ ಜಿಲ್ಲಾಧ್ಯಕ್ಷರು ಯು. ವೆಂಕಟೇಶ ಅಡಿಗ ಉಳ್ತೂರು 9902282758 – ಪ್ರಸನ್ನ ತುಂಗ ಜಿಲ್ಲಾ ಕಾರ್ಯದರ್ಶಿ 99805 24976



